ಮಂಗಳೂರು: ‘ರಾಜಸ್ಥಾನ ಗ್ರಾಮೀಣ ಮೇಳ’ ಉದ್ಘಾಟನೆ
ಮಂಗಳೂರು, ನ. 21: ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ ಆಭರಣಗಳು, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ‘ರಾಜಸ್ಥಾನ ಗ್ರಾಮೀಣ ಮೇಳ’ದ ಉದ್ಘಾಟನೆಯು ಮಂಗಳವಾರ ನಗರದ ಹೊಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮೇಳದ ಸಂಘಟಕ ದಿನೇಶ್ ಶರ್ಮಾ ಅವರು, ವಿವಿಧ ರಾಜ್ಯಗಳ ಕರಕುಶಲ, ಕೈಮಗ್ಗ ಸೀರೆಗಳು ಹಾಗೂ ಆಭರಣ ಮತ್ತು ಕಲಾಕೃತಿಗಳ ಪ್ರದರ್ಶನವು ನಡೆಯಲಿದೆ. ಮೇಳವು ನ.30ರವರೆಗೆ ನಡೆಯಲಿದೆ ಎಂದರು.
ರಾಜಸ್ಥಾನ ಗ್ರಾಮೀಣ ಮೇಳವು ಕಳೆದ 20 ವರ್ಷಗಳಿಂದ ವಿವಿಧ ಪ್ರದೇಶಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳುತ್ತಾ ಬಂದಿದೆ. ಮೇಳದಲ್ಲಿ ರಾಜಸ್ಥಾನ ಸೇರಿದಂತೆ 18 ರಾಜ್ಯಗಳ ಕೈಮಗ್ಗ ಸೀರೆಗಳು, ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರು ಸಿಲ್ಕ್ ಸಾರಿ, ಒಡಿಸ್ಸಾ ಸಿಲ್ಕ್ ಸಾರಿಗಳು, ಕೋಸಿಯಾ ಕೈಮಗ್ಗ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನಾರಸ್ ಸಿಲ್ಕ್‌ಸಾರಿ, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್‌ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಮೇಳದಲ್ಲಿ ಲಭ್ಯ ಇವೆ ಎಂದು ದಿನೇಶ್ ಶರ್ಮಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇಳದ ಒಡಿಸ್ಸಾದ ವಿಜಯ್ ಚಿನ್ನರಾಯ್, ಮುಹಮ್ಮದ್ ಅಸ್ಲಂ ಮತ್ತು ಸೈಯದ್ ಮುಸ್ತಫಾ ಉಪಸ್ಥಿತರಿದ್ದರು.