ತಲಪಾಡಿ ಅಝ್‌ನಿಯೋ ವತಿಯಿಂದ ಝೈನಿ ಉಸ್ತಾದ್‌ಗೆ ಸನ್ಮಾನ
Update: 2017-11-21 20:27 IST
ಮಂಗಳೂರು, ನ.21: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಅವರನ್ನು ತಲಪಾಡಿ ಕೆಸಿ ರೋಡ್ ಅಝ್‌ನಿಯೋ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಹಾಗೂ ಸ್ಥಳೀಯ ರಬ್ಬಾನಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೈನ್ ಹಬೀಬ್ ಅಲ್ ಬುಖಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಂಇಯ್ಯತುಲ್ ಉಲಮಾ ತಲಪಾಡಿ ವಲಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ ಕಿನ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಥಳೀಯ ಪ್ರಮುಖರಾದ ಮುಹಮ್ಮದ್ ಮದನಿ ಕೆ.ಸಿ.ರೋಡ್, ಹಕೀಂ ಪೂಮಣ್ಣು, ಮಿನ್‌ಹಾಜ್ ಸ್ವಾಲಿಹಾತ್ ಕಾಲೇಜಿನ ವ್ಯವಸ್ಥಾಪಕ ಎಮ್ಮೆಸ್ಸೆಂ ಸಿರಾಜ್ ಶುಭ ಹಾರೈಸಿದರು.
ರಬ್ಬಾನಿ ಫೌಂಡೇಶನ್‌ನ ಕಾರ್ಯದರ್ಶಿ ಇರ್ಫಾನ್ ನೂರಾನಿ ಸ್ವಾಗತಿಸಿದರು. ಅಝ್‌ನಿಯೋ ಸಂಸ್ಥೆಯ ವ್ಯವಸ್ಥಾಪಕ ಅಝ್‌ಹರ್ ಪೂಮಣ್ಣು ವಂದಿಸಿದರು.