ರೊಹಿಂಗ್ಯ ಗಡಿಪಾರು: ವಿಚಾರಣೆ ಮುಂದೂಡಿದ ಸುಪ್ರೀಂ

Update: 2017-11-21 14:58 GMT

ಹೊಸದಿಲ್ಲಿ, ನ. 21: ರೊಹಿಂಗ್ಯ ಗಡಿಪಾರು ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 5ಕ್ಕೆ ಮುಂದೂಡಿದೆ.

ಇಬ್ಬರು ರೊಹಿಂಗ್ಯ ವಲಸಿಗರಾದ ಮುಹಮ್ಮದ್ ಸಲೀಮುಲ್ಲಾ ಹಾಗೂ ಮುಹಮ್ಮದ್ ಶಾಕಿರ್ ಮನವಿ ಸಲ್ಲಿಸಿ, “ಮ್ಯಾನ್ಮಾರ್‌ನಲ್ಲಿ ನಮ್ಮ ಸಮುದಾಯದ ಮೇಲೆ ಹಿಂಸಾಚಾರ, ದೌರ್ಜನ್ಯ ಹೆಚ್ಚಿದ ಹಿನ್ನೆಲೆಯಲ್ಲಿ ನಾವು ಪರಾರಿಯಾಗಿ ಭಾರತಕ್ಕೆ ಬಂದೆವು. ಆದರೆ, ಇಲ್ಲಿ ನಮ್ಮನ್ನು ವಲಸಿಗರು ಎಂದು ಪರಿಗಣಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ಈ ಹಿಂದೆ ಹಿಂಸಾಚಾರದ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನಿಂದ ಭಾರತಕ್ಕೆ ಬಂದವರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ-ಎನ್‌ಸಿಆರ್, ರಾಜಸ್ಥಾನದಲ್ಲಿ ನೆಲೆ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News