ಕಾಲಿಗೆ ಕಲ್ಲು ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ
Update: 2017-11-21 21:31 IST
ಹೆಬ್ರಿ, ನ.21: ವ್ಯಕ್ತಿಯೊಬ್ಬರು ತನ್ನ ಕಾಲಿಗೆ ಹಗ್ಗದಿಂದ ಕಲ್ಲು ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಬಂಗಾರಗುಡ್ಡೆಯ ಕೊಡ್ಜ ಬೆಟ್ಟು ಎಂಬಲ್ಲಿ ನ.20ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕೊಡ್ಜಬೆಟ್ಟು ನಿವಾಸಿ ಲಕ್ಷ್ಮಣ ನಾಯ್ಕ(82) ಎಂದು ಗುರುತಿಸ ಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಸಮೀಪದ ತೋಟದಲ್ಲಿರುವ ಕೆರೆಗೆ ಕಾಲಿಗೆ ಕಲ್ಲನ್ನು ಕಟ್ಟಿ ಕೊಂಡು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.