×
Ad

ಕ್ರೆಡಿಟ್ ಕಾರ್ಡ್ ಬಳಸಿ ಹಣ ಡ್ರಾ: ದೂರು ದಾಖಲು

Update: 2017-11-21 21:45 IST

ಮಂಗಳೂರು, ನ.21: ಚೆನ್ನೈ ಮೂಲದ ಸಿಟಿಬ್ಯಾಂಕ್‌ನ ಕ್ರೆಡಿಟ್‌ಕಾರ್ಡ್ ಬಳಸಿಕೊಂಡು ವ್ಯಕ್ತಿಯೊಬ್ಬರ 70 ಸಾವಿರ ರೂ. ಡ್ರಾ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರೂರಿನ ನಾಗ ವಂಚನೆಗೆ ಒಳಗಾದ ಗ್ರಾಹಕ. ನ.19ರಂದು ನಾಲ್ಕು ಬಾರಿ 70 ಸಾವಿರ ರೂ. ರೆಹಾನ್ ಹುಡ್ ಸ್ಟೋರ್ ಹೆಸರಿನಲ್ಲಿ ಡ್ರಾ ಮಾಡಲಾಗಿದೆ. ಇವರ ಮೊಬೈಲ್‌ಗೆ ರಾತ್ರಿ 8:45ರ ಹೊತ್ತಿಗೆ ಹಣ ಡ್ರಾ ಮಾಡಿದ ಬಗ್ಗೆ ಸಂದೇಶ ಬಂದಾಗ ವಿಷಯ ಬಹಿರಂಗಗೊಂಡಿದೆ. ಕೂಡಲೇ ಕಾರ್ಡ್ ಬ್ಲಾಕ್ ಮಾಡಿಸಿ ಮರುದಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಬಗ್ಗೆ ಸಿಟಿ ಬ್ಯಾಂಕ್‌ನ ಚೆನ್ನೈನಲ್ಲಿರುವ ಮುಖ್ಯಕಚೇರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಇದನ್ನು ಬ್ರಿಟನ್‌ನಿಂದಲೇ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಬ್ರಿಟಿಷ್ ಪೌಂಡ್ 184.99 ಜಿಬಿಪಿ, 307.52 ಜಿಬಿಪಿ, 101.97 ಜಿಬಿಪಿ, 220.06 ಜಿಬಿಪಿಯಂತೆ 4 ಬಾರಿ ಡ್ರಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News