×
Ad

ಭಾರತದ ಬ್ರಹ್ಮೋಸ್ ಸೂಪರ್ ಸೋನಿಕ್ ಕ್ಷಿಪಣಿಯ ಯಶಸ್ವೀ ಪ್ರಯೋಗ

Update: 2017-11-22 16:32 IST

ಕೊಲ್ಕತ್ತಾ,ನ.22 :  ವಿಶ್ವದ ಅತ್ಯಂತ ವೇಗದ ಸೂಪರ್ ಸೋನಿಕ್ ನೌಕಾ ಕ್ಷಿಪಣಿ ಬ್ರಹ್ಮೋಸ್ ಅನ್ನು ಭಾರತೀಯ ವಾಯು ಸೇನೆಯ ಪ್ರಮುಖ ಯುದ್ಧ ವಿಮಾನ ಸುಖೋಯ್-30ಎಂಕೆಐ ಮೂಲಕ ಇಂದು ಯಶಸ್ವಿಯಾಗಿ ಉಡಾಯಿಸಿ ಭಾರತ ಇತಿಹಾಸ ನಿರ್ಮಿಸಿದೆ.  ಬಂಗಾಳ ಕೊಲ್ಲಿಯಲ್ಲಿನ ಒಂದು ನಿರ್ದಿಷ್ಟ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ತಲುಪಿದೆ.

ಈ ಕ್ಷಿಪಣಿಯ ಯಶಸ್ವಿ  ಪ್ರಯೋಗದಿಂದ ಭಾರತದ ವಾಯುಸೇನೆಯ ಯುದ್ಧ ಸಾಮರ್ಥ್ಯ ಇನ್ನಷ್ಟು ಬಲಗೊಂಡಂತಾಗಿದೆ.
ಬ್ರಹ್ಮೋಸ್ ಎಎಲ್‍ಸಿಎಎಂ 2.5 ಟನ್ ತೂಗುತ್ತಿದ್ದು  ಇದು ಭಾರತದ ಸುಖೊಯಿ-30ಎಂಕೆಐ ಇಲ್ಲಿಯ ತನಕ ಉಡಾಯಿಸಿದ ಅತ್ಯಂತ ಭಾರದ ಕ್ಷಿಪಣಿಯಾಗಿದೆ. ಈ ಯುದ್ಧವಿಮಾನದಲ್ಲಿ  ಶಸ್ತ್ರಾಸ್ತ್ರ ಸಾಗಿಸಲು ಅನುಕೂಲವಾಗುವಂತೆ ಕೆಲವೊಂದು ಮಾರ್ಪಾಟುಗಳನ್ನು ಎಚ್‍ಎಎಲ್ ನಲ್ಲಿ ಮಾಡಲಾಗಿತ್ತು.

ಇಂದಿನ ಪ್ರಾಯೋಗಿಕ ಕ್ಷಿಪಣಿ ಹಾರಾಟದಿಂದ ಬ್ರಹ್ಮೋಸ್ ನೆಲ, ಆಗಸ ಹಾಗೂ ಸಾಗರದಿಂದ  ಪ್ರಯೋಗಕ್ಕೆ ಸನ್ನದ್ಧವಾಗಿದೆ. ಭಾರತದ ಡಿಫೆನ್ಸ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್ ಆರ್ಗನೈಸೇಶನ್ ಹಾಗೂ ರಷ್ಯಾದ ಎನ್‍ಪಿಒಎಂ ಜಂಟಿ ಪ್ರಯತ್ನದಲ್ಲಿ ಇದನ್ನು ನಿರ್ಮಿಸಲಾಗಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಾಧನೆಗಾಗಿ ಡಿಆರ್‍ಡಿಒಗೆ ಶುಭಾಶಯ ಹೇಳಿದ್ದಾರೆ. ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯ ವೇಳೆ ಬ್ರಹ್ಮೋಸ್ ಏರೋಸ್ಪೇಸ್ ಇದರ  ಮಹಾನಿರ್ದೇಶಕರಾದ ಡಾ ಸುಧೀರ್ ಮಿಶ್ರಾ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News