ಗುಜರಾತ್ ನಲ್ಲಿ ಪದ್ಮಾವತಿ ಬಿಡುಗಡೆಗೆ ಅವಕಾಶ ನೀಡೆವು: ಸಿಎಂ ವಿಜಯ್ ರೂಪಾನಿ
ಗಾಂಧಿನಗರ, ನ.22: ರಾಜಸ್ಥಾನ ಹಾಗು ಮಧ್ಯಪ್ರದೇಶದ ನಂತರ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಗುಜರಾತ್ ಪದ್ಮಾವತಿ ಚಲನಚಿತ್ರಕ್ಕೆ ನಿಷೇಧ ಹೇರಿದೆ.
“ರಜಪೂತರ ಭಾವನೆಗಳಿಗೆ ಧಕ್ಕೆ ತರುವ ಪದ್ಮಾವತಿಗೆ ಗುಜರಾತ್ ಸರಕಾರ ಅವಕಾಶ ನೀಡುವುದಿಲ್ಲ. ನಮ್ಮ ಇತಿಹಾಸವನ್ನು ವಿಕೃತಗೊಳಿಸುವುದಕ್ಕೆ ನಾವು ಬಿಡಲಾರೆವು. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬುತ್ತೇವೆ ಆದರೆ ನಮ್ಮ ಸಂಸ್ಕೃತಿಗೆ ಧಕ್ಕೆಯಾದರೆ ಸಹಿಸುವುದಿಲ್ಲ” ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ಪದ್ಮಾವತಿ ಚಿತ್ರ ಬಿಡುಗಡೆಗೆ ಸಿದ್ಧವಾದಂದಿನಿಂದ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಚಿತ್ರದಲ್ಲಿ ರಾಣಿ ಪದ್ಮಿನಿಯ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗಿದೆ ಎಂದು ಕರ್ಣಿ ಸೇನೆ ಆರೋಪಿಸಿದೆ. ಇಷ್ಟೇ ಅಲ್ಲದೆ ಕೆಲವರು ಭನ್ಸಾಲಿ, ದೀಪಿಕಾ ತಲೆಕಡಿಯುವವರಿಗೆ, ಜೀವಂತ ಸುಡುವವರಿಗೆ 10 ಕೋಟಿ, 5 ಕೋಟಿ ರೂ. ಬಹುಮಾನ ಘೋಷಿಸುತ್ತಿದ್ದಾರೆ,
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಸೆಂಬರ್ 1ರಂದು ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ.