2.9 ಕೋಟಿ ಪೀಠೊಪಕರಣಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದ ಕಂಪೆನಿ

Update: 2017-11-22 16:13 GMT

ನ್ಯೂಯಾರ್ಕ್, ನ. 22: ಕುರ್ಚಿ ಸಮೇತ ಬಿದ್ದು ಕ್ಯಾಲಿಫೋರ್ನಿಯದಲ್ಲಿ ಎಂಟನೆ ಮಗು ಮೃತಪಟ್ಟ ಬಳಿಕ, ಆಸನ ತಯಾರಿಕಾ ಕಂಪೆನಿ ಐಕಿಯ ತನ್ನ 2.9 ಕೋಟಿ ಆಸನಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.

ಗೋಡೆಗೆ ಸರಿಯಾಗಿ ಆಧರಿಸದಿದ್ದರೆ ಸುಲಭವಾಗಿ ಬೀಳಬಹುದಾದ ‘ಚೆಸ್ಟ್’ ಮತ್ತು ‘ಡ್ರೆಸರ್’ ಮಾದರಿಯ ಆಸನಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಕಂಪೆನಿಯು ಜನರಲ್ಲಿ ಜಾಗೃತಿ ಹುಟ್ಟಿಸುತ್ತಿದೆ ಎಂದು ಸಿಇಒ ಲ್ಯಾರ್ಸ್ ಪೀಟರ್‌ಸನ್ ಮಂಗಳವಾರ ಹೇಳಿದರು.

ಮೇ ತಿಂಗಳಲ್ಲಿ ಸ್ವೀಡನ್ ಕಂಪೆನಿ ಐಕಿಯದ ಮಾಲ್ಮ್ ಡ್ರೆಸರ್ ಮಾದರಿಯ ಆಸನ ಉರುಳಿಬಿದ್ದಾಗ ಅದರಲ್ಲಿ ಕೂತಿದ್ದ ಎರಡು ವರ್ಷದ ಮಗು ಆಸನದ ಅಡಿಗೆ ಬಿದ್ದು ಮೃತಪಟ್ಟಿತ್ತು. ಇದು ಆಸನಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.

ಐಕಿಯದ ‘ಡ್ರೆಸರ್’ ಮಾದರಿಯ ಆಸನದ ಅಡಿಗೆ ಸಿಲುಕಿ ಈವರೆಗೆ 3 ವರ್ಷದ ಒಳಗಿನ ಕನಿಷ್ಠ 8 ಮಕ್ಕಳು ಮೃತಪಟ್ಟಿದ್ದಾರೆ. ಮೊದಲ ಸಾವು 28 ವರ್ಷಗಳ ಹಿಂದೆ ಸಂಭವಿಸಿತ್ತು. ನಂತರದ ಸಾವುಗಳು 2002ರ ಬಳಿಕ ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News