×
Ad

ಯೆನೆಪೊಯ: ಅಂತರ್ ಕಾಲೇಜುಗಳ ಬಾಸ್ಕೆಟ್ ಬಾಲ್ ಪಂದ್ಯಾವಳಿ

Update: 2017-11-22 23:13 IST

ಮಂಗಳೂರು, ನ. 22: ಯೆನೆಪೊಯ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗವು 10ನೆ ಬಿ.ಎಸ್.ಎ ಕುಮಾರ್ ಸ್ಮಾರಕ ದಕ್ಷಿಣ ವಲಯದ ಅಂತರ್ ಕಾಲೇಜುಗಳ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಯೆನೆಪೋಯ ವಿಶ್ವವಿದ್ಯಾಲಯ ಯೆನ್ಡೂರೆನ್ಸ್ ಝೋನ್‌ನಲ್ಲಿ ನವೆಂಬರ್ 13 ರಿಂದ 18ರವರೆಗೆ ನಡೆಯಿತು.

ದಕ್ಷಿಣ ವಲಯದ ವಿವಿಧ ಕಾಲೇಜುಗಳಿಂದ ಪುರುಷರ ವಿಭಾಗದಲ್ಲಿ 20 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 10 ತಂಡಗಳು ಭಾಗವಹಿಸಿದ್ದವು.ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಪಂದ್ಯಾಟವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಜಿ. ಶ್ರೀಕುಮಾರ್ ಮೆನನ್ ಮತ್ತು ಅಬ್ದುಲ್ ರಹ್ಮಾನ್ ಅವರು ಚ್ಛಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಯೆನೆಪೋಯ ಪದವಿ ಕಾಲೇಜಿನ ಪ್ರಾಂಶುಪಾಲ ಜೋಬಿ ಇ.ಸಿ., ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯದ ವಿತ್ತಾಧಿಕಾರಿ ಮುಹಮ್ಮದ್ ಬಾವ .ಪಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕಿ ಶಿಲ್ಪಾ ಅವರು ಕಾರ್ಯಕ್ರಮ ನಿರೂಪಿಸಿದರು.ಪುರುಷರ ವಿಭಾಗದಲ್ಲಿ ಚಾಂಪಿಯನ್ ಟ್ರೋಫಿಯನ್ನು ಕ್ರೈಸ್ಟ್ ಕಾಲೇಜು ಬೆಂಗಳೂರು ಮತ್ತು ದ್ವಿತೀಯ ಪ್ರಶಸ್ತಿಯನ್ನು ನೆಹರೂ ಕಾಲೇಜು ಕಾಂಜ್ಞಗಾಡ್ ಮುಡಿಗೇರಿಸಿತು.ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಂ.ಓ.ಪಿ. ವೈಷ್ಣ ಕಾಲೇಜು ಚೆನ್ನೈ ಮತ್ತು ದ್ವಿತೀಯ ಸ್ಥಾನವನ್ನು ಯೆನೆಪೋಯ ವಿಶ್ವವಿದ್ಯಾನಿಲಯ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News