ನ.25ರಂದು ರೇರಾ ಬಗ್ಗೆ ಉಪನ್ಯಾಸ ಮತ್ತು ಸಂವಾದ

Update: 2017-11-23 17:42 GMT

ಮಂಗಳೂರು, ನ. 23: ನಗರದ ಬೊಂದೇಲಿನಲ್ಲಿರುವ ಎಂ.ಎಸ್.ಎನ್.ಎಂ. ಬೆಸೆಂಟ್ ಸ್ನಾತಕೋತ್ತರ ಕಾಲೇಜಿನ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಮಂಗಳೂರಿನ ನಾಗರಿಕರಿಗೆ ವಿಶೇಷ ತಿಳುವಳಿಕೆಯನ್ನು ನೀಡುವುದಕ್ಕಾಗಿ ಮಣೇಲ್ಶ್ರೀ ನಿವಾಸ ನಾಯಕ್ ಜ್ಞಾನ ಮಾಲಿಕೆ ಎಂಬ ಉಪನ್ಯಾಸ ಸರಣಿಯನ್ನು ನ.25ರಂದು ಮಧ್ಯಾಹ್ನ 3:30ಕ್ಕೆ ಬೆಸೆಂಟ್ ಬೋಂದೆಲ್ ಕ್ಯಾಂಪಸ್‌ನಲ್ಲಿ ಏರ್ಪಡಿಸಲಾಗಿದೆ.

ಕ್ರೆಡಾಯ್ ಮಂಗಳೂರು ಹಾಗೂ ಅಲೆಗ್ರೊ ವೆಂಚರ್ ಸಂಸ್ಥೆಯ ಅಧ್ಯಕ್ಷ ಡಿ.ಬಿ. ಮೆಹ್ತಾ ಅವರು ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೊಳಿಸಿದ ನೂತನ ರಿಯಲ್ ಎಸ್ಟೇಟ್ ಕಾಯ್ದೆ ರೇರಾ (ಆರ್‌ಇಆರ್‌ಎ) ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಸಂವಾದ ನಡೆಸಿಕೊಡಲಿದ್ದಾರೆ.

ಆಸಕ್ತರು ಭಾಗವಹಿಸಬಹುದೆಂದು ಬೆಸೆಂಟ್ ಎಂ.ಬಿ.ಎ. ಕಾಲೇಜಿನ ನಿರ್ದೇಶಕ ಡಾ. ನಾರಾಯಣ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News