ಮುಗಾಬೆಗೆ ಬಂಧನದಿಂದ ರಕ್ಷಣೆ, ಭದ್ರತೆ

Update: 2017-11-23 18:14 GMT

ಹರಾರೆ (ಜಿಂಬಾಬ್ವೆ), ನ. 23: ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ ಹಾಗೂ ದೇಶದಲ್ಲಿ ಅವರ ರಕ್ಷಣೆಯ ಖಾತರಿಯನ್ನು ನೀಡಲಾಗಿದೆ ಎಂದು ಮೂಲಗಳು ಗುರುವಾರ ಹೇಳಿವೆ.

ಮುಗಾಬೆ ರಾಜೀನಾಮೆ ನೀಡುವುದಕ್ಕೆ ಮುನ್ನ ಅವರೊಂದಿಗೆ ಈ ಸಂಬಂಧ ಒಪ್ಪಂದವೊಂದಕ್ಕೆ ಬರಲಾಗಿದೆ ಎನ್ನಲಾಗಿದೆ.

ಮಾಜಿ ಉಪಾಧ್ಯಕ್ಷ ಎಮರ್‌ಸನ್ ಮನಂಗಾಗ್ವ ಶುಕ್ರವಾರ ದೇಶದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News