ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಸೆರೆ
ಮಂಗಳೂರು, ನ. 24: ಗಾಂಜಾ ಮಾರಾಟ ಮಾಡಲು ಗಿರಾಕಿಗಳಿಗೆ ಕಾಯುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಕಾರಾಗೃಹ ಬಳಿಕ ಡಯಟ್ ಕಾಲೇಜಿನ ಬಳಿ ಬಂಧಿಸಿದ್ದಾರೆ.
ತೋಟಬೆಂಗ್ರೆಯ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ದೀಕ್ಷಿತ್ ನಾಯಕ್ (19) ಮತ್ತು ಮಡಿಕೇರಿಯ ಲೈನ್ ಮೈಸೂರ ರಸ್ತೆಯ ಕಾರ್ತಿಕ್ ಕೆ.ಜೆ. (21) ಬಂಧಿತ ಆರೋಪಿಗಳು.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಾಗೃಹದ ಡಯಟ್ ಕಾಲೇಜು ಬಳಿ ಗಾಂಜಾವನ್ನಿಟ್ಟು ಗಿರಾಕಿಗಳಿಗೆ ಕಾಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 7,250 ರೂ. ಮೌಲ್ಯ 150 ಗ್ರಾಂ ಗಾಂಜಾ, 10 ಸಾವಿರ ರೂ. ಮೌಲ್ಯದ ಮೂರು ಮೊಬೈಲ್ ಫೋನ್ ಸಹಿತ 17,250 ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ಮಾರ್ಗದರ್ಶನದಲ್ಲಿ ಬರ್ಕೆ ಠಾಣಾ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಕೆ.ಅವರ ನೇತೃತ್ವ ದಲ್ಲಿ ಪಿಎಸ್‌ಐ ಯೋಗೀಶ್ವರನ್ ಮತ್ತು ಸಿಬ್ಬಂದಿಗಳಾದ ಪ್ರಕಾಶ್, ಕಿಶೋರ್ ಕೋಟ್ಯಾನ್, ಗಣೇಶ್ ಕುಮಾರ್, ನಾಗರಾಜ್ ಚಂದರಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.