×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-11-24 22:49 IST

ಕಾರ್ಕಳ, ನ.24: ಅನಾರೋಗ್ಯದಿಂದ ಬಳಲುತ್ತಿದ್ದ ಬಜಗೋಳಿ ಮುಡಾರು ನಿವಾಸಿ ಮಹಾಬಲ ಪೂಜಾರಿ(61) ಎಂಬವರು ಮಾನಸಿಕವಾಗಿ ನೊಂದು ನ.22ರಂದು ರಾತ್ರಿ ವೇಳೆ ಮನೆಯ ಮಾಳಿಗೆ ಕೋಣೆಯ ಮೇಲ್ಛಾವಣಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ:  ಮೂರು ತಿಂಗಳ ಹಿಂದೆ ಮನೆಯ ಬಳಿಯ ಮರದಿಂದ ಬಿದ್ದು ಗಾಯಗೊಂಡಿದ್ದ ಕೆದೂರು ಗ್ರಾಮದ ವಿಠಲ ಕುಲಾಲ್ ಎಂಬವರ ಮಗ ಸಂತೋಷ್(33) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.23ರಂದು ಸಂಜೆ ವೇಳೆ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News