ಕೋಟ: ಕೆರೆಗೆ ಬಿದ್ದು ಮೃತ್ಯು
Update: 2017-11-24 22:51 IST
ಕೋಟ, ನ.24: ಮೂಡು ಗಿಳಿಯಾರು ಎಂಬಲ್ಲಿ ಇಂದು ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸಂಜು ಪೂಜಾರಿ(67) ಎಂದು ಗುರುತಿಸಲಾಗಿದೆ. ಇವರು ಕೃಷಿಗೆ ತಮ್ಮ ಜಾಗದಲ್ಲಿದ್ದ ಕೆರೆಯಿಂದ ಪಂಪ್‌ಸೆಟ್‌ನಿಂದ ನೀರು ಹಾಯಿಸುತ್ತಿ ದ್ದರು. ಆಗ ಪಂಪ್‌ನಿಂದ ನೀರು ಮೇಲಕ್ಕೆ ಬಾರದ ಕಾರಣ ಫುಟ್‌ಬಾಲ್ ನೋಡಲು ಕೆರೆಯ ನೀರಿಗೆ ಇಳಿದ ಅವರು ಆಯತಪ್ಪಿಬಿದ್ದು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.