×
Ad

ಉಡುಪಿಯಲ್ಲಿ ಬ್ರೈಲ್ ತರಬೇತಿ

Update: 2017-11-25 23:05 IST

ಉಡುಪಿ, ನ.25: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಅನುಷ್ಠಾನಗೊಳಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿ ವಾರಕ್ಕೆ ಒಂದು ದಿನದಂತೆ ಪ್ರತಿ ರವಿವಾರ ದೃಷ್ಟಿದೋಷವುಳ್ಳವರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ತರಬೇತಿಯನ್ನು ಹಾಗೂ ಬ್ರೈಲ್ ತರಬೇತಿಯನ್ನು ನೀಡಲಿದೆ.

ಇದರ ಪ್ರಾರಂಭಿಕ ಹಂತವಾಗಿ ಆಸಕ್ತರ ನೋಂದಣಿಯನ್ನು ಆರಂಭಿಸ ಲಾಗಿದ್ದು, ದೃಷ್ಠಿದೋಷವುಳ್ಳ(ಶೇ.40-100ರಷ್ಟು) ವಿಕಲಚೇತನರು ತಮ್ಮ ಹೆಸರನ್ನು ದಾಖಲಿಸುವಂತೆ ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0820-2533322/9164276061ನ್ನು ಅಥವಾ ಸಂಸ್ಥೆಯನ್ನು ಸಂಪರ್ಕಿಸುವಂತೆ ರೆಡ್‌ಕ್ರಾಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News