ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ: ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
Update: 2017-11-26 19:57 IST
ಉಡುಪಿ, ನ.26: ಉಡುಪಿಯಲ್ಲಿ ಇಂದು ನಡೆದ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯಲ್ಲಿ ಮುಸ್ಲಿಮರು ತಂಪುಪಾನೀಯ ವಿತರಿಸುವ ಕಾರ್ಯ ಮಾಡಿದರು.
ಶೋಭಾ ಯಾತ್ರೆಯಲ್ಲಿದ್ದ ಸಾವಿರಾರು ಮಂದಿಗೆ ನಗರದ ಕೋರ್ಟ್ ಎದುರು 15-20 ಮಂದಿ ಮುಸ್ಲಿಮರೆ ನಿಂತು ತಂಪುಪಾನೀಯ ನೀಡಿದರು. ಮಧ್ಯಾಹ್ನ 2.30ರಿಂದ ಸಂಜೆ 4ಗಂಟೆಯವರೆಗೆ ಒಟ್ಟು 15,000 ಗ್ಲಾಸ್ ಪಾನೀಯ ವಿತರಿಸಿದ್ದೇವೆ ಎಂದು ಮುಹಮ್ಮದ್ ಆರೀಫ್ ದೊಡ್ಡಣಗುಡ್ಡೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅನ್ಸಾರ್ ಅಹ್ಮದ್, ಜಾನ್, ಶಾಹೀದ್ ರಹ್ಮತುಲ್ಲಾ, ಮುಬೀನ್, ಹರ್ಷದ್ ಹಾಗು ಇತರರು ಉಪಸ್ಥಿತರಿದ್ದರು.