×
Ad

ಯುನಿವೆಫ್: 2017ನೆ ಸಾಲಿನ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಗಾಗಿ ಅರ್ಜಿ ಆಹ್ವಾನ

Update: 2017-11-26 22:39 IST

ಮಂಗಳೂರು, ನ. 26: ನಾಡು, ನುಡಿ, ಭಾಷೆ ಹಾಗೂ ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ ಯಾವುದೇ ರೀತಿಯ ಪ್ರಶಸ್ತಿ ಹಾಗೂ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ 'ಯುನಿವೆಫ್ ಕರ್ನಾಟಕ' ಪ್ರತಿ ವರ್ಷ 5000 ರೂ. ನಗದನ್ನೊಳಗೊಂಡ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಯನ್ನು ನೀಡುತ್ತಾ ಬಂದಿದೆ. ಈಗ 2017ನೆ ಸಾಲಿನ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2014 ರಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, 2015 ರಲ್ಲಿ ಚರಿತ್ರೆಕಾರ ಮತ್ತು ಸಾಹಿತಿ ಬಿ.ಎಂ. ಇಚ್ಲಂಗೋಡ್ ಮತ್ತು 2016 ರಲ್ಲಿ ಪತ್ರಿಕಾ ಛಾಯಾಗ್ರಾಹಕ, ಕವಿ, ಲೇಖಕ ಮರ್ಹೂಮ್ ಅಹ್ಮದ್ ಅನ್ವರ್ ರಿಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡಲಾಗಿದೆ. 

ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು. ದ.ಕ. ಜಿಲ್ಲೆಯ ಮುಸ್ಲಿಮ್ ಸಮುದಾಯದ ಇಂಥ ವ್ಯಕ್ತಿಗಳ ಪರಿಚಯವಿರು ವವರು ಅವರ ವಿವರಗಳನ್ನು ಡಿಸೆಂಬರ್ 3ರ ಒಳಗಾಗಿ ಕಳುಹಿಸಬೇಕೆಂದು ಯುನಿವೆಫ್ ಕರ್ನಾಟಕ ಕಾರ್ಯದರ್ಶಿ ಯು. ಕೆ. ಖಾಲಿದ್ ತಿಳಿಸಿರುತ್ತಾರೆ. ಈ ಪ್ರಶಸ್ತಿಯನ್ನು ಡಿಸೆಂಬರ್ 8 ರಂದು "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ನೀಡಲಾಗುವುದು ಎಂದಿದ್ದಾರೆ. 

ವಿಳಾಸ
ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಆಯ್ಕೆ ಸಮಿತಿ, ಯುನಿವೆಫ್ ಕರ್ನಾಟಕ, ಒಂದನೇ ಮಹಡಿ, ಲುಲು ಸೆಂಟರ್, ಫಳ್ನೀರ್, ಮಂಗಳೂರು -575002 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಯು. ಕೆ. ಖಾಲಿದ್ 98451 99931, ಸೈಫುದ್ದೀನ್ 99459 13824, ನೌಫಲ್ 831 059 8907

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News