×
Ad

ಅತ್ತಾವರ ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ಅಧಿಕಾರ ಸ್ವೀಕಾರ

Update: 2017-11-27 22:15 IST

ಮಂಗಳೂರು, ನ.27: ಅತ್ತಾವರ ವಾರ್ಡ್ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ತೌಫೀಕ್ ಕೆ.ಎಂ. ಜೆಪ್ಪುಮಹಾಕಾಳಿ ಪಡ್ಪುವಿನಲ್ಲಿರುವ ಡಾ.ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ರವಿವಾರ ಅಧಿಕಾರ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಬ್ಲಾಕ್ ಯುವ ಘಟಕದ ಅಧ್ಯಕ್ಷ ಮೆರಿಲ್ ರೇಗೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ರಾಜ್ಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸುಹೈಲ್ ಕಂದಕ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವರುಣ್ ರಾಜ್ ಅಂಬಟ್ ಮಾತನಾಡಿದರು.

ಕಾರ್ಪೊರೇಟರ್ ಶೈಲಜಾ, ದಕ್ಷಿಣ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಮಾನಂದ ಪೂಜಾರಿ, ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸದಾಶಿವ ಅಮೀನ್, ವಾರ್ಡ್ ಅಧ್ಯಕ್ಷ ಜಯಂತ ಪೂಜಾರಿ, ನಾಮ ನಿರ್ದೇಶನ ಕಾರ್ಪೋರೇಟರ್ ದಿನೇಶ್ ಪಿ.ಎಸ್., ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸ್ವಾದ್ ಎಸ್.ಕೆ., ಸವಾನ್ ಎಸ್.ಕೆ., ಜತಿನ್ ಬಂಗೇರ, ಅತ್ತಾವರ ವಾರ್ಡ್ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ನವಾಝ್, ಸ್ಥಳೀಯ ಮಸೀದಿಯ ಅಧ್ಯಕ್ಷ ಮುಹಮ್ಮದ್, ಸೌತ್ ವೆಲ್ಛೇರ್ ಕಮಿಟಿಯ ಅಧ್ಯಕ್ಷ ಶರೀಫ್ ಟಿ.ಎ., ವಸಂತ ಮಹಾಕಾಳಿಪಡ್ಪು, ಸೀತಾರಾಮ ಜೆಪ್ಪುಉಪಸ್ಥಿತರಿದ್ದರು. ಮನ್ಸೂರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News