×
Ad

ಮಂಗಳೂರು: ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ಅರ್ಜಿ ವಜಾ

Update: 2017-11-27 22:16 IST

ಮಂಗಳೂರು, ನ.27: ಕಟ್ಟಡದಲ್ಲಿ ನ್ಯೂನತೆಗಳಿವೆ ಎಂದು ಆರೋಪಿಸಿ ನಗರದ ಅಪೂರ್ವ ಬಿಲ್ಡರ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಲ್ಲಿ ಹೂಡಿರುವ ಅರ್ಜಿಯನ್ನು ವಜಾ ಮಾಡಿ ಜಿಲ್ಲಾ ಗ್ರಾಹಕರ ನ್ಯಾಯಾಲದ ಆದೇಶ ನೀಡಿದೆ.

ಗಣೇಶ್ ಶೆಟ್ಟಿ ಎಂಬವರ ಮಾಲಕತ್ವದ ಅಪೂರ್ವ ಬಿಲ್ಡರ್ಸ್‌ನ ಕೊಡಿಯಾಲ್‌ಬೈಲ್ ಅದ್ವೈತ್ ಅಪಾರ್ಟ್‌ಮೆಂಟ್ 2002ರಲ್ಲಿ ನಿರ್ಮಾಣಗೊಂಡಿತ್ತು. ಈ ಅಪಾರ್ಟ್‌ಮೆಂಟ್‌ನ ಕೆಲವು ಸದಸ್ಯರು 2011ರಲ್ಲಿ ಕಟ್ಟಡದ ನ್ಯೂನತೆಗಳ ಬಗ್ಗೆ ಜಿಲ್ಲಾ ಗ್ರಾಹಕರ ವೇದಿಕೆಗೆ ದಾವೆ ಹೂಡಿದ್ದರು. ಈ ಪ್ರಕರಣದ ಬಗ್ಗೆ ಯಾವುದೇ ನ್ಯೂನತೆಗಳನ್ನು ಸಾಬೀತುಪಡಿಸುವಲ್ಲಿ ವಿಲವಾಗಿರುವುದರಿಂದ ಹಾಗೂ ದೂರು ಸತ್ಯಕ್ಕೆ ದೂರವಾಗಿದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಅರ್ಜಿ ತಿರಸ್ಕರಿಸಿದೆ.

ಜಿಲ್ಲಾ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ವಿಶ್ವೇಶ್ವರ ಭಟ್ ಹಾಗೂ ಸದಸ್ಯರಾದ ಲಾವಣ್ಯ ರೈ ತೀರ್ಪು ನೀಡಿದ್ದಾರೆ. ಅಪೂರ್ವ ಅಸೋಸಿಯೇಟ್ಸ್‌ನ ಮಾಲಕರ ಪರವಾಗಿ ನ್ಯಾಯವಾದಿ ದಯಾನಂದ ರೈ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News