ಮೇಲ್ಕಾರ್: ಮಹಿಳಾ ಕಾಲೇಜಿನಲ್ಲಿ "ಒತ್ತಡ ನಿರ್ವಹಣೆ" ವಿಶೇಷ ಕಾರ್ಯಾಗಾರ
ಬಂಟ್ವಾಳ, ನ. 27: "ರಾಷ್ಟ್ರೀಯ ಶಿಕ್ಷಣ ದಿನ"ದ ಅಂಗವಾಗಿ ಮಂಗಳೂರು ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ವತಿಯಿಂದ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ "ಒತ್ತಡ ನಿರ್ವಹಣೆ" ವಿಶೇಷ ಕಾರ್ಯಾಗಾರ ಮೇಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಎಸ್.ಎಂ. ರಶೀದ್ ಹಾಜಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶೇಖ್ ಆದಂ ಸಾಹೇಬ್, ನಿವೃತ್ತ ಶಿಕ್ಷಕರಾದ ಎಚ್. ಎಂ. ಮುಹಮ್ಮದ್, ಮುಹಮ್ಮದ್ ಹನೀಫ್ ಮತ್ತು ಅಮಾನುಲ್ಲಾ ಖಾನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಜಿಲ್ಲಾಧ್ಯಕ್ಷ ಸಮಿವುಲ್ಲಾ ಕಾರ್ಯ್ರಮದ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರವಿಚಂದ್ರ ಕಾರ್ಕಳ, ಬಿ.ಎಂ. ತುಂಬೆ, ಕೆ.ಎಂ.ಕೆ ಮಂಜನಾಡಿ, ಎಂ. ಎಚ್. ಮಲಾರ್, ಅಬ್ದುಲ್ ಲತೀಫ್ ಬಿ.ಕೆ ಉಪಸ್ಥಿತರಿದ್ದರು.
ಹಮೀದ್ ಕೆ.ಮಾಣಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಝೀದ್. ಎಸ್ ವಂದಿಸಿ, ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು.