×
Ad

ಶಮ್ಸ್ ಶಾಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ದಿನಾಚರಣೆ ಬಹುಮಾನ ವಿತರಣಾ ಸಮಾರಂಭ

Update: 2017-11-29 17:46 IST

ಭಟ್ಕಳ,ನ.29: ಇಲ್ಲಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧಾ ಕಾರ್ಯಕ್ರಮ ಬುಧವಾರ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೀರೇಂದ್ರ ಶಾನುಭಾಗ ಮಾತನಾಡಿ, "ಕಳೆದ 30-40 ವರ್ಷಗಳಿಗೆ ಹೋಲಿಸಿದರೆ ಇಂದು ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಅಂದು ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಕಷ್ಟ ಪಡಬೇಕಾಗಿತ್ತು. ಇಂದು ಅತ್ಯಂತ ಸುಲಭದಲ್ಲಿ ಶಿಕ್ಷಣ ಕೈಗಟುವಂತಾಗಿದೆ. ಹೆಚ್ಚೆಚ್ಚು ಸೌಲಭ್ಯಗಳು, ಆದುನಿಕ ತಂತ್ರಜ್ಞಾನ ಇವೆಲ್ಲವೂ ಶಿಕ್ಷಣವನ್ನು ಸರಳೀಕರಣಗೊಳಿಸಿದೆ. ಅಂದು ಒಂದೇ ಕೋಣೆಯಲ್ಲಿ ನಾಲ್ಕಾರು ತರಗತಿಗಳು, ಏಕೋಪಾಧ್ಯಾಯ ಶಾಲೆಗಳಿದ್ದು ಒರ್ವ ಶಿಕ್ಷಕ ಎಲ್ಲ ತರಗತಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರು ಅವರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಭದ್ರಬುನಾದಿಯನ್ನು ಹಾಕುವಲ್ಲಿ ಯಶಸ್ವಿಯಾದರು, ಇಂದು ಸಕಲ ಸೌಲಭ್ಯಗಳಿದ್ದೂ ವಿದ್ಯಾರ್ಥಿಗಳ ಮಟ್ಟವನ್ನು ಮೇಲಕ್ಕೆ ತರಲು ಆಗುತ್ತಿಲ್ಲ" ಎಂದರು. 

ಅಂಜುಮನ್ ಪಿ.ಯು. ಕಾಲೇಜು ಪ್ರಾಂಶುಪಾಲ ಮುಹಮ್ಮದ್ ಯೂಸೂಫ್ ಕೋಲಾ ಮಾತನಾಡಿ, ನಮ್ಮ ಗುರಿ ಉದ್ದೇಶಗಳು ಸೀಮಿತವಾಗಿದ್ದರಿಂದ ನಾವು ಸೀಮಿತವಾದುದನ್ನೆ ಪಡೆದುಕೊಳ್ಳುತ್ತಿದ್ದೇವೆ. ನಮ್ಮಲ್ಲಿ ವ್ಯಾಪಕ ಗುರಿನ್ನು ಇಟ್ಟುಕೊಳ್ಳಬೇಕು. ಕೇವಲ ಭಾರತಕಷ್ಟೆ ಅಲ್ಲ ಇಡೀ ಜಗತ್ತಿಗೆ ನಾಯಕತ್ವ ವಹಿಸುವ ಗುಣ ನಮ್ಮಲ್ಲಿದೆ. ನಾವದನ್ನು ಅರಿತುಕೊಂಡು ಸಾಧಿಸುವಲ್ಲಿ ಪ್ರಯತ್ನಶೀಲರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಮುಹಮ್ಮದ್ ಅಶ್ರಫ್ ಬರ್ಮಾವರ್, ಸ್ಮಾರ್ಟ್ ಯುಗದಲ್ಲ ವಿದ್ಯಾರ್ಥಿಗಳು ಸ್ಮಾರ್ಟ್ ಆಗಿದ್ದಾರೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕಗಳಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸ್ಮಾರ್ಟ್ ಆಗಬೇಕಿದೆ ಎಂದರು. 

ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ ಸ್ವಾಗತಿಸಿದರು. ಶಿಕ್ಷಕ ನಜೀಫ್ ಅತಿಥಿಗಳನ್ನು ಪರಿಚಯಿಸಿದರು. ಶಾಝಿರ್ ಹುಸೇನ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೌಲಾನ ಅಬ್ದುಸ್ಸುಭಾನ್ ನದ್ವಿ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳಾದ ಅಬ್ದುಲ್ ಲತೀಪ್ ಹಾಗೂ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. 

ಸಂಸ್ಥೆಯ ಹಿರಿಯ ಸದಸ್ಯ, ಸಮಾಜ ಸೇವಕ ಸೈಯ್ಯದ್ ಹಸನ್ ಬರ್ಮಾವರ್, ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಕಾರ್ಯದರ್ಶಿ ತಲ್ಜಾ ಸಿದ್ದಿಬಾಪ, ಮೌಲಾನ ಎಸ್.ಎಂ.ಸೈಯ್ಯದ್ ಝುಬೇರ್, ಇಸ್ಮಾಯಿಲ್ ಝವರೇಝ್, ಯಾಹ್ಯಾ ರುಕ್ನುದ್ದೀನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News