×
Ad

ಬಂಟ್ವಾಳ : ಜೇಸಿ ಆಂದೋಲನ ಕುರಿತು ಮಾಹಿತಿ ಕಾರ್ಯಾಗಾರ

Update: 2017-11-29 18:31 IST

ಬಂಟ್ವಾಳ, ನ. 29: ಮಂಗಳೂರಿನ ಜೇಸಿ ಮಂಗಳೂರು ಸಾಮ್ರಾಟ್ ವತಿಯಿಂದ ಜೇಸಿ ಆಂದೋಲನ ಕುರಿತು ಮಾಹಿತಿ ಕಾರ್ಯಾಗಾರವು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಜೇಸಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಅವರು ಜೇಸಿ ಆಂದೋಲನದ ಮಹತ್ವಗಳನ್ನು ಸಾರಿ ಹೇಳಿದರು.
ಮುಖ್ಯ ಅತಿಥಿಗಳಾಗಿ ವಲಯ 15ರ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ರಾಕೇಶ್ ಕುಂಜೂರು ಮತ್ತು ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಪಶುಪತಿ ಶರ್ಮಾ ಶುಭ ಹಾರೈಸಿದರು.

ಈ ಸಂದರ್ಭ ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಚೇಂಬರ್‍ನ ಆರಂಭಿಕ ಪದಾಧಿಕಾರಿಗಳಾಗಿದ್ದ ಪ್ರೊ.ವೃಷಭರಾಜ್, ಮಹಾಬಲೇಶ್ವರ ಹೆಬ್ಬಾರ್ ಬಿ.ಸಿ.ರೋಡಿನಲ್ಲಿ ಜೇಸಿ ಬೆಳೆದುಬಂದ ದಾರಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.ಜೇಸಿ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಿ.ರಾಮಚಂದ್ರ ರಾವ್ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ಜೋಡುಮಾರ್ಗ ಜೇಸಿಯ ಅಹ್ಮದ್ ಮುಸ್ತಾಫಾ, ಹರೀಶ ಮಾಂಬಾಡಿ, ರಾಮದಾಸ ಬಂಟ್ವಾಳ ಸಂವಾದದಲ್ಲಿ ಮಾತನಾಡಿದರು. ಈ ಸಂದರ್ಭ ಜೋಡುಮಾರ್ಗ ಜೇಸಿಯ ನಿಯೋಜಿತ ಅಧ್ಯಕ್ಷೆ ಸವಿತಾ ನಿರ್ಮಲ್, ಕಾರ್ಯದರ್ಶಿ ಅಜಿತ್ ಜಿ.ಜೋಷಿ, ಮಂಗಳೂರು ಸಾಮ್ರಾಟ್ ಕಾರ್ಯದರ್ಶಿ ವೆಂಕಟರಮಣ, ಜೋಡುಮಾರ್ಗ ಜೇಸಿಯ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News