ಬಂಟ್ವಾಳ : ಡಾ.ಬಿ.ಅಂಬೇಡ್ಕರ್ ಭವನಕ್ಕೆ ಸಚಿವರಿಂದ ಶಿಲಾನ್ಯಾಸ
Update: 2017-11-29 18:34 IST
ಬಂಟ್ವಾಳ, ನ. 29: ಬಾಳ್ತಿಲ ಗ್ರಾಮದ ಬಿ.ಆರ್. ನಗರದ ಪರಿಶಿಷ್ಟ ಜಾತಿ /ಪಂಗಡದ ಕಾಲನಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುವ ಡಾ.ಬಿ.ಅಂಬೇಡ್ಕರ್ ಭವನದ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಕೋರ್ಯ, ಜಿಪಂ ಇಂಜಿನಿಯರುಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಸಲೀಂ ಬರಿಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಗ್ರಾಪಂ ಸದಸ್ಯ ಮಧುಸೂದನ್ ಶೆಣೈ, ಬಾಳ್ತಿಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪಂ ಸದಸ್ಯರಾದ ಪುರುಷೋತ್ತಮ, ರಜನಿ, ವೀಣಾ, ಪುಷ್ಪಾವತಿ ಜಯಶ್ರೀ, ಗುತ್ತಿಗೆದಾರ ಚಿತ್ತರಂಜನ್ ಉಪಸ್ಥಿತರಿದ್ದರು.