×
Ad

ಟೈಲರಿಂಗ್ ತರಬೇತಿ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ

Update: 2017-11-29 18:48 IST

ಬಂಟ್ವಾಳ,ನ.29: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೌಶಾಲ್ಯಾಭಿವೃದ್ಧಿ ವತಿಯಿಂದ ಟೈಲರಿಂಗ್ ತರಬೇತಿ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕಿ ಗೀತಾಜೈನ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಿರುವುದರಿಂದ ತಮ್ಮ ಕೆಲಸದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಅವಕಾಶ ನೀಡಿದಂತಾಗಿದೆ. ತಮ್ಮ ಬಟ್ಟೆಗಳನ್ನು ತಾವೇ ಹೊಲಿದು ಕೊಳ್ಳುವುದರಿಂದ ಆರ್ಥಿಕ ಸ್ಥಿತಿಯಲ್ಲೂ ಸುಧಾರಣೆ ಕಂಡುಕೊಳ್ಳಬಹುದು ಎಂದು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನೀತಾ ನಾಯಕ್ ಮಾತನಾಡಿ,  ಹೆಚ್ಚುವರಿ ತರಬೇತಿಗಾಗಿ ರುಡ್‍ಸೆಟ್ ತರಬೇತಿ ಸಂಸ್ಥೆಗೆ ಅರ್ಜಿ ಹಾಕಬಹುದು. ಇದರಿಂದ ಫ್ಯಾಶನ್ ಡಿಸೈನಿಂಗ್‍ನಲ್ಲಿ ಪ್ರಬುದ್ಧತೆ ಸಾಧಿಸಬಹುದು. ಟೈಲರಿಂಗ್  ಮೆಶೀನ್ ಇಲ್ಲದಿರುವ ಸದಸ್ಯರು ಸ್ವ ಸಹಾಯಗಳಿಂದ ಪ್ರಗತಿನಿಧಿ ಮೊತ್ತ ಪಡೆದು ಮೆಶಿನ್ ಖರೀದಿಸಬಹುದು ಎಂದರು.

ಇದೇ ವೇಳೆ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಧ್ಯಾ, ನಝೀಮ ಹಾಗೂ ಸುನೀತಾ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಪುಷ್ಪಾಲತಾ, ಜ್ಞಾನವಿಕಾಸ ಸಮನ್ಯಯಾಧಿಕಾರಿ ಜಯಂತಿ ಉಪಸ್ಥಿತರಿದ್ದರು. ವನಜಾಕ್ಷಿ ಸ್ವಾಗತಿಸಿ, ಸುನೀತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News