×
Ad

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ವೀಕ್ಷಕರ ಭೇಟಿ

Update: 2017-11-29 18:57 IST

ಬೆಳ್ತಂಗಡಿ,ನ.29: ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ವೀಕ್ಷಕರು ಭೇಟಿ ನೀಡಿ ಪಕ್ಷ ಸಂಘಟನೆಯ ಬಗ್ಗೆ ಮುಖಂಡರುಗಳೊಡನೆ ಸಮಾಲೋಚನೆ ನಡೆಸಿದೆರು.

ಸಭೆಯನ್ನುದ್ದಶಿಸಿ ಮಾತನಾಡಿದ ವೀಕ್ಷಕರಾದ ವಿಜಯಕುಮಾರ್ ರೈ ಅವರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬಲಿಷ್ಟವಾಗಿ ಸಂಘಟಿತವಾಗಿದ್ದು ರಾಜ್ಯದ ಎಲ್ಲ ಮನೆಗಳಿಗೂ ರಾಜ್ಯ ಸರಕಾರದ ಸಾಧನೆಗಳನ್ನು ತಲುಪಿಸಲು ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಆಂದೋಲನವನ್ನು ಯಶಸ್ವಿಯಾಗಿಸಲು ಪ್ರಯತ್ನಿಸಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀನಿವಾಸ ವಿ, ಕಿಣಿ ಅವರು ಮಾತನಾಡಿ ಮುಂದಿನ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಶಾಸಕ ಕೆ ವಸಂತ ಬಂಗೇರ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ ಎಂಬುದನ್ನು ಈಗಾಗಲೆ ಮುಖ್ಯಮಂತ್ರಿಯವರು ಹಾಗೂ  ಪಕ್ಷದ ಮುಖಂಡರುಗಳು ಪ್ರಕಟಿಸಿದ್ದು ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ದವಾಗಿದೆ. ಬಿಜೆಪಿ ಅಪ ಪ್ರಚಾರದ ಮೂಲಕ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ, ಬಿಜೆಪಿಯವರ ಈ ಅಪಪ್ರಚಾರದ ಬಗ್ಗೆ ಕಾರ್ಯಕರ್ತರು ಎಚ್ಚರವಹಿಸಬೇಕಾಗಿದೆ.ಗ್ರಾಮೀಣ ಬ್ಲಾಕ್‍ನಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮ ನಡೆಯುತ್ತಿದ್ದು ಅದಕ್ಕೆ ಇನ್ನಷ್ಟು ವೇಗ ನೀಡುವುದಾಗಿ ತಿಳಿಸಿದರು. 

ಸಭೆಯನ್ನುದ್ದೇಶಿಸಿ ಜಿಲ್ಲಾ ಹಿಂದುಳಿದವರ್ಗದ ಘಟಕದ ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಧರಣೇಂದ್ರಕುಮಾರ್, ಜಿ.ಪಂ ಸದಸ್ಯ ಸಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಕೇಶವ ಪಿ ಬೆಳಾಲು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ, ಜಿಲ್ಲಾ ಎಸ್‍ಸಿ ಘಟಕದ ಅದ್ಯಕ್ಷ ಶೇಖರ ಕುಕ್ಕೇಡಿ, ತಾ. ಪಂ ಅಧ್ಯಕ್ಷೆ ದಿವ್ಯಜ್ಯೋತಿ, ವೀಕ್ಷಕರುಗಳಾದ ಸೈಮನ್ ಸಿ,ಜೆ, ಅಬ್ದುಲ್ ಸತ್ತಾರ್, ಡೆನ್ನಿಸ್, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್,  ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಈಶ್ವರ ಭಟ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸುಬು ಇಳಂತಿಲ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮನೋಹರ್ ಕುಮಾರ್, ನವೀನ್ ರೈ ಬಾರ್ಯ, ಶ್ರೀಧರ ಕಳೆಂಜ, ಹಾಗೂ ಇತರರು ಉಪಸ್ಥಿತರಿದ್ದರು. ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ರೆಖ್ಯ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಬಂದಾರು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News