ಆಗಸದಿಂದ ವಿಮಾನದೊಳಕ್ಕೆ ಜಿಗಿದ ಸಾಹಸಿಗಳು!
Update: 2017-11-29 19:03 IST
ಸಾಮಾನ್ಯವಾಗಿ ಹಾರಾಟದ ನಡುವೆಯೇ ವಿಮಾನದಿಂದ, ಹೆಲಿಕಾಪ್ಟರ್ ನಿಂದ ಹೊರಕ್ಕೆ ಜಿಗಿಯುವ ಸಾಹಸಿಗಳನ್ನು ನಾವು ನೋಡಿದ್ದೇವೆ. ಆದರೆ ಇಬ್ಬರು ಸಾಹಸಿಗಳು ಆಕಾಶದಿಂದಲೇ ವಿಮಾನದೊಳಕ್ಕೆ ಜಿಗಿಯುವ ಮೂಲಕ ಸಿನಿಮೀಯ ಶೈಲಿಯ ಸಾಹಸ ಮೆರೆದಿದ್ದಾರೆ.
ಈ ಸಾಹಸದ ವಿಡಿಯೋವನ್ನು ರೆಡ್ ಬುಲ್ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ಯೂರೋಪ್ ನ ಅತೀ ಎತ್ತರದ ಪರ್ವತಗಳಲ್ಲೊಂದಾದ ಜುಂಗ್ ಫ್ರಾ ಪರ್ವತ ಏರಿದ ಫ್ರಾನ್ಸ್ ನ ಫ್ರೆಡ್ ಫ್ಯೂಗನ್ ಹಾಗು ವಿನ್ಸ್ ರೆಫ್ಫೆಟ್ ಕೆಳಕ್ಕೆ ಜಿಗಿದಿದ್ದಾರೆ. ವಿಂಗ್ ಸೂಟ್ ಗಳ ಸಹಾಯದಲ್ಲಿ ಆಗಸದಲ್ಲಿ ತೇಲಿದ ಅವರು. ಆಗಸದ ನಡುವೆ ವಿಮಾನದೊಳಕ್ಕೆ ಜಿಗಿದಿದ್ದಾರೆ.
ಜಿಗಿಯುವ ಸಮಯ ಅಲ್ಪ ವ್ಯತ್ಯಾಸವಾಗಿದ್ದರೂ ಭಾರೀ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಈ ಇಬ್ಬರ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.