ಬರಾಕ ಇಂಟರ್ ನ್ಯಾಶನಲ್ ಶಾಲೆಯ 2ನೆ ವಾರ್ಷಿಕ ಕ್ರಿಡಾಕೂಟ
ಮಂಗಳೂರು.ನ.29: ಬರಾಕ ಇಂಟರ್ ನ್ಯಾಶನಲ್ ಸ್ಕೂಲ್‌ನ 2ನೆ ವಾರ್ಷಿಕ ಕ್ರೀಡಾಕೂಟ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ,ಶಾಲೆ ಆಡಳಿತ ಮಂಡಳಿಯ ಟ್ರಸ್ಟಿ ಉನ್ನಿ ಬ್ಯಾರಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಬೆಲೂನ್ ಹಾರಿ ಬಿಡುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಬಳಿಕ ಒಂದರಿಂದ ಏಳನೆ ತರಗತಿಯ ವಿದ್ಯಾರ್ಥಿಗಳಿಗೆ ಓಟ,ಮೂರು ಕಾಲಿನ ಓಟ,ಶಾಟ್‌ಪುಟ್,ಚಕ್ರ ಎಸೆತ,ಚಮಚದಲ್ಲಿ ಲಿಂಬೆ ಹಣ್ಣು ಇಟ್ಟು ಕೊಂಡು ಓಟದ ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.ಅಚ್ಚುಕಟ್ಟಾಗಿ ಕ್ರೀಡಾಕುಟವನ್ನು ಹಮ್ಮಿಕೊಂಡ ಸಂಸ್ಥೆಯ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು ಅತಿಥಿಗಳು ಪ್ರಶಂಸಿದರು.ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಸಮಾರೋಪ ಸಮಾರಂಭದಲ್ಲಿ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.