×
Ad

ಡಿ.1ಕ್ಕೆ ಈದ್ ಮಿಲಾದ್ ರಜೆ ನೀಡಲು ದ.ಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹ

Update: 2017-11-29 20:02 IST

ಮಂಗಳೂರು,ನ.29:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯ ಬಾಂಧವರು ಪ್ರವಾದಿ (ಸ.ಅ)ರವರ ಜನ್ಮ ದಿನವಾದ ಈದ್ ಮಿಲಾದ್‌ನ್ನು ಡಿ.1ರ ಶುಕ್ರವಾರ ಆಚರಿಸಲು ಧಾರ್ಮಿಕ ಮುಖಂಡರಾದ ಖಾಜಿಯವರು ನಿರ್ದೇಶನ ನೀಡಿದ್ದಾರೆ.ಈದ್ ಮಿಲಾದ್ ಗಾಗಿ ಡಿ.2ರಂದು ನೀಡಲಾಗಿರುವ ಸರಕಾರಿ ರಜೆ ಯನ್ನು ಬದಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.1ರಂದು ನೀಡಲು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News