×
Ad

ಡಿ.1-31: ‘ಹಲವು ಧರ್ಮಗಳು-ಒಂದು ಭಾರತ’ ಅಭಿಯಾನ

Update: 2017-11-29 20:07 IST

ಉಡುಪಿ, ನ.29: ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಹಲವು ಧರ್ಮಗಳು- ಒಂದು ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ಸಹೋದರತ್ವ ಅಭಿಯಾನವನ್ನು ಡಿ.1ರಿಂದ 31ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಓ ಕ್ಯಾಂಪಸ್ ರಾಜ್ಯ ಕಾರ್ಯದರ್ಶಿ ಝೀಶಾನ್ ಅಖಿಲ್, ಅಭಿಯಾನದ ಪ್ರಯುಕ್ತ ಮ್ಯಾರಥಾನ್, ಮೊಹಲ್ಲಾ ಸಭೆಗಳು, ಕಾರ್ನರ್ ಮೀಟಿಂಗ್, ಸೈಕಲ್ ಜಾಥ, ಮನೆ ಮನೆ ಭೇಟಿ, ಕ್ಯಾಂಪಸ್ ಲೆಕ್ಚರಿಂಗ್, ಉಪನ್ಯಾಸಗಳು, ಸೆಮಿ ನಾರ್, ವಿವಿಧ ಸ್ಪರ್ಧೆಗಳು, ಪೋಸ್ಟರ್ ಪ್ರದರ್ಶನಗಳನ್ನು ನಡೆಸಲಾಗುವುದು ಎಂದರು.

ಅಭಿಯಾನದ ಮುಖ್ಯ ಕಾರ್ಯಕ್ರಮವಾಗಿ ಡಿ.16ರಂದು ಅಪರಾಹ್ನ 3 ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಇದರಲ್ಲಿ ಎಸ್‌ಐಓ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಮಾಳ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಹಾಗೂ ಗಣ್ಯರು ಭಾಗ ವಹಿಸಲಿರುವರು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ, ಕಾರ್ಯದರ್ಶಿ ಬಿಲಾಲ್, ಉಡುಪಿ ಅಧ್ಯಕ್ಷ ಮುಹಮ್ಮದ್ ಶಾರುಕ್, ಅಭಿಯಾನದ ಸಂಚಾ ಲಕ ಅಫ್ವಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News