ಬಂಟ್ವಾಳ : ನ.29, ಡಿ.1ರಂದು ವಿದ್ಯುತ್ ವ್ಯತ್ಯಯ
Update: 2017-11-29 20:17 IST
ಬಂಟ್ವಾಳ, ನ. 29:ತಾಲೂಕಿನ ವಗ್ಗ ವಿದ್ಯುತ್ ಉಪ ವಿಭಾಗ ವ್ಯಾಪ್ತಿಯಲ್ಲಿ 33ಕೆವಿ ಗುರುವಾಯನಕೆರೆ-ವಗ್ಗ ಮಾರ್ಗದಲ್ಲಿ ಪುನರ್ ಪರಿಶೀಲನೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ನ. 29 ಮತ್ತು ಡಿ.1ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇಲ್ಲಿನ ವಗ್ಗ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದಂತೆ ಕಾವಳಪಡೂರು, ಕಾವಳಮೂಡೂರು, ಪಿಲಾತಬೆಟ್ಟು, ಅಂಚಿಕಟ್ಟೆ, ಇರ್ವತ್ತೂರು, ಮೂಡುಪಡುಕೋಡಿ, ಕಾಡಬೆಟ್ಟು, ದೇವಸ್ಯಪಡೂರು, ವಗ್ಗ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟನೆ ತಿಳಿಸಿದೆ.