×
Ad

ಪರೀಕ ಅರಮನೆಯ ಕಂಬಳ ಮಹೋತ್ಸವ

Update: 2017-11-29 21:10 IST

ಉಡುಪಿ, ನ.29: ಪರ್ಕಳ ಪರೀಕ ಅರಮನೆಯ ವರ್ಷಾವಧಿ ಕಂಬಳ ಮಹೋತ್ಸವವು ಬುಧವಾರ ಅರಮನೆಯ ಮುಂಭಾಗದ ಗದ್ದೆಯಲ್ಲಿ ನಡೆಯಿತು.

ಈ ಕಂಬಳದಲ್ಲಿ ಒಟ್ಟು 16 ಜೋಡಿ ಕೋಣಗಳು ಭಾಗವಹಿಸಿದ್ದು, ಸೀನಿಯರ್ ಹಾಗೂ ಜ್ಯೂನಿಯರ್ ಎಂಬ ಎರಡು ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದವು. ಪ್ರಥಮ ಅರ್ಧ ಪವನ್ ಚಿನ್ನ ಮತ್ತು ದ್ವಿತೀಯ ಕಾಲು ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಪರೀಕ ಅರಮನೆಯ ಚಿತ್ತರಂಜನ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News