ಹೊಡೆದಾಡಿಕೊಂಡ ಸ್ಕೇಟಿಂಗ್ ಪಟುಗಳು : ಪ್ರಕರಣ ದಾಖಲು

Update: 2017-11-29 16:08 GMT

ಮಂಗಳೂರು, ನ. 29: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಸ್ಕೇಟಿಂಗ್ ರಿಂಕ್‌ನಲ್ಲೇ ಹೊಡೆದಾಡಿಕೊಂಡಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನವರಾದ ರಾಘವೇಂದ್ರ ಹಾಗೂ ಅಂಕಿತ್ ನಡುವೆ ಹೊಡೆದಾಟ ನಡೆದಿದೆ.

ನಗರದ ಹೊಗೆಬೈಲ್‌ನಲ್ಲಿರುವ ನೂತನ ಫ್ರಾನಿಸ್ಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯಶಿಪ್ ನಡೆಯುತ್ತಿದ್ದ ವೇಳೆ ಈ ಹೊಡೆದಾಟ ನಡೆದಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ಫೈನಲ್ ಪಂದ್ಯ ನಡೆಯುತ್ತಿತ್ತು. ಸ್ಕೇಟರ್‌ಗಳು ಪಿನಿಶ್ ಲೈನ್ ದಾಟುವ ಮೊದಲೇ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ರಾಘವೇಂದ್ರ ಇನ್ನೋರ್ವ ಸ್ಕೇಟಿಂಗ್‌ಪಟು ಅಂಕಿತ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಅಲ್ಲಿದ್ದ ರೆಫ್ರಿಗಳು ಓಡಿ ಬಂದು ಹೊಡೆದಾಟವನ್ನು ಬಿಡಿಸಿದ್ದಾರೆ. ಈ ಸ್ಕೇಟಿಂಗ್ ಪಟುಗಳ ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತಂಡಗಳು ನೀಡಿದ ದೂರನ್ನು ಉರ್ವ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News