ಶಬರಿಮಲೆ ಯಾತ್ರೆಗೆ ಸರಕು ವಾಹನ ಬಳಸದಂತೆ ಸೂಚನೆ
Update: 2017-11-29 22:36 IST
ಉಡುಪಿ, ನ.29: ಶಬರಿಮಲೈಯಲ್ಲಿ ಜನವರಿ 17ರವರೆಗೆ ನಡೆಯಲಿರುವ ಶಬರಿಮಲೈ ಮಂಡಲ ಮಕರವಿಲಕ್ಕು ಉತ್ಸವದ ಪ್ರಯುಕ್ತ ಉಡುಪಿ ಜಿಲ್ಲೆ ಯಿಂದ ಶಬರಿಮಲೈಗೆ ಭೇಟಿ ನೀಡುವ ಯಾತ್ರಾರ್ಥಿಗಳು ಯಾತ್ರೆಗೆ ಸರಕು ಸಾಗಾಣಿಕೆ ವಾಹನಗಳನ್ನು ಉಪಯೋಗಿಸಬಾರದು. ಅದರ ಬದಲು ಪ್ರಯಾ ಣಿಕ ವಾಹನಗಳನ್ನು ಬಳಸಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಯಲ್ಲಿ ಸೂಚಿಸಿದೆ.