ಕಾಪು : ಜುಗಾರಿ ಆಡುತ್ತಿದ್ದ ಐವರ ಬಂಧನ
Update: 2017-11-29 22:37 IST
ಕಾಪು, ನ.29: ಏಣಗುಡ್ಡೆ ಗ್ರಾಮದ ಲತಾ ವೈನ್ಸ್ ಬಳಿ ನ.28ರಂದು ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಡುತ್ತಿದ್ದ ಐವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಆನಂದ ಬಂಡಿವಡ್ಡರ(21), ಬಾಗಲಕೋಟೆಯ ಶರಣಪ್ಪ ಕಬುರ್ಗಿ(35), ಹಾವೇರಿಯ ಪ್ರಶಾಂತ್ ಕುಮಾರ್(33), ರವಿ ಆಲದಕಟ್ಟಿ (25), ಈರಾಳ ಗ್ರಾಮದ ರಾಜು ತಿಮ್ಮಪ್ಪವಡ್ಡರ(25) ಎಂಬವರು ಬಂಧಿತ ಆರೋಪಿಗಳು. ಇವರಿಂದ 710ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.