ಬೋಸ್ಟನ್ ಕನ್ಸಲ್ಟಿಂಗ್ ಜೊತೆ ಕೈಜೋಡಿಸಿದ ಕರ್ಣಾಟಕ ಬ್ಯಾಂಕ್

Update: 2017-11-29 18:33 GMT

ಮಂಗಳೂರು, ನ.29: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ತನ್ನ ಬದಲಾವಣೆಯ ಪರ್ವವನ್ನು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಇಂಡಿಯಾ) ಪ್ರೈ.ಲಿ ಜೊತೆ ಬ್ಯಾಂಕ್‌ನ ಮಂಗಳೂರಿನಲ್ಲಿರುವ ಮುಖ್ಯ ಕಚೇರಿಯಲ್ಲಿ 29, ಬುಧವಾರದಂದು ಆರಂಭಿಸಿದೆ.

ರೂಪಾಂತರಗೊಳ್ಳುವ (ಟ್ರಾನ್ಸ್‌ಫಾರ್ಮೆಶನ್ ಪ್ರೊಜೆಕ್ಟ್) ಯೋಜನೆ ಕೆಬಿಎಲ್ ವಿಕಾಸ್‌ನ ಉದ್ದೇಶ ಬ್ಯಾಂಕಿನ ಮೂಲ ಮೌಲ್ಯ ಮತ್ತು ಗುರುತನ್ನು ಜೊತೆಯಾಗಿಸಿಕೊಂಡು ತಂತ್ರಜ್ಞಾನದ ಬಗ್ಗೆ ಗಮನಹರಿಸುವ ಮೂಲಕ ಬ್ಯಾಂಕನ್ನು ಪ್ರಸ್ತುತ ಮತ್ತು ಪ್ರಮುಖ ಬ್ಯಾಂಕನ್ನಾಗಿಸುವುದಾಗಿದೆ.

ಈ ಬದಲಾವಣಾ ಪ್ರಕ್ರಿಯೆಯು ಬ್ಯಾಂಕ್ ಸಂಪೂರ್ಣ ರೂಪಾಂತರಗೊಳ್ಳುವ ನಿಟ್ಟಿನಲ್ಲಿ ಒಂದು ಧೈರ್ಯದ ಮತ್ತು ಸಮಯೋಚಿತ ನಡೆಯಾಗಿದೆ. ರೂಪಾಂತರದಲ್ಲಿ ಜಾಗತಿಕ ನಾಯಕರೆನಿಸಿಕೊಂಡಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಜೊತೆಗಿನ ನಮ್ಮ ಪ್ರಯಾಣವು ನಮ್ಮ ಎಲ್ಲಾ ಖಾತೆದರರು ಮತ್ತು ಶೇರು ಗ್ರಾಹಕರ ಮೌಲ್ಯವನ್ನು ವೃದ್ಧಿಸಲಿದೆ. ಈಮೂಲಕ ನಮ್ಮ ಬ್ಯಾಂಕ್ ಹೊಸ ಯುಗವನ್ನು ಪ್ರವೇಶಿಸಿದೆ ಮತ್ತು ಬ್ಯಾಂಕಿನ 8000ಕ್ಕೂ ಅಧಿಕ ಮಾನವಬಲದಿಂದ, ಬ್ಯಾಂಕ್ ಮೊದಲು ಎಂಬ ಮನೋಭಾವದ ಜೊತೆಗೆ ಬಿಸಿಜಿಯ ಸಾಬೀತಾಗಿರುವ ಅನುಭವದೊಂದಿಗೆ ನಾವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿ ರೂಪಾಂತರವನ್ನು ಹೊಂದಲು ಕಟಿಬದ್ಧವಾಗಿದ್ದೇವೆ ಎಂದು ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕ ಮತ್ತು ಸಿಇಒ ಆದ ಮಹಾಬಲೇಶ್ವರ ಎಂ ಎಸ್ ತಿಳಿಸಿದರು.
ನಾನು ಈ ಜೊತೆಗಾರಿಕೆಯಿಂದ ತುಂಬಾ ಕಾತರನಾಗಿದ್ದೇನೆ ಜೊತೆಗೆ ರೂಪಾಂತರದ ಜವಾಬ್ದಾರಿಯ ಬಗ್ಗೆಯೂ ನನಗೆ ಸಮಾನವಾದ ಅರಿವು ಇದೆ. ಕರ್ಣಾಟಕಾ ಬ್ಯಾಂಕ್ ಒಂದು ಅತ್ಯುತ್ತಮ ಬ್ಯಾಂಕ್ ಆಗಿದೆ ಮತ್ತು ಬ್ಯಾಂಕನ್ನು ಹೊಸ ಕೆಬಿಎಲ್ ಮಾಡಬೇಕೆಂಬ ಅವರ ಕನಸನ್ನು ಸಾಕಾರಗೊಳಿಸಲು ಬಿಸಿಜಿ ಸಿದ್ಧವಾಗಿದೆ ಎಂದು ಬಿಸಿಜಿಯ ಹಿರಿಯ ಜೊತೆಗಾರ ಮತ್ತು ನಿರ್ದೇಶಕರಾದ ಸೌರಬ್ ತ್ರಿಪಾಠಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಕಾರ್ಯಕಾರಿಯೇತರ ಮುಖ್ಯಸ್ಥ ಪಿ ಜಯರಾಂ ಭಟ್, ಪ್ರಧಾನ ವ್ಯವಸ್ಥಾಪಕರುಗಳಾದ ಚಂದ್ರಶೇಖರ್ ರಾವ್ ಬಿ, ಸುಭಾಷ್ಚಂದ್ರ ಪುರಾಣಿಕ್, ವೈವಿ ಬಾಲಚಂದ್ರ, ಮುರಳೀಧರ್ ಕೃಷ್ಣ ರಾವ, ನಾಗರಾಜ್ ರಾವ್ ಬಿ, ಗೋಕುಲ್‌ದಾಸ್ ಪೈ, ಮಹಾಲಿಂಗೇಶ್ವರ ಕೆ, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ ಆರ್ ಕಾರಂತ್ ಮತ್ತು ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ ರಾಘವ ಹಾಗೂ ಬ್ಯಾಂಕಿನ ಇತರ ಎಲ್ಲಾ ಸಿಬ್ಬಂದಿ ಹಾಜರಿದ್ದರು. ಪ್ರಧಾನ ವ್ಯವಸ್ಥಾಪಕರು ಮತ್ತು ಮುಖ್ಯ ಟ್ರಾನ್ಸ್‌ಪೊರ್ಮೇಶನ್ ಅಧಿಕಾರಿ ಗೋಕುಲ್‌ದಾಸ್ ಪೈ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಟ್ರಾನ್ಸ್‌ಪೊರ್ಮೇಶನ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಾಧವ ವಿ ಪಿ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News