ಹಾಕಿ ವಿಶ್ವಕಪ್ ಲಾಂಛನ ಅನಾವರಣ

Update: 2017-11-29 18:37 GMT

ಭುವನೇಶ್ವರ, ನ.29: ಪುರುಷರ ಹಾಕಿ ವಿಶ್ವಕಪ್-2018ರ ಅಧಿಕೃತ ಲಾಂಛನವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಅನಾವರಣಗೊಳಿಸಿದರು.

ಮುಂದಿನ ವರ್ಷ ನ.28 ರಿಂದ ಡಿ.16ರ ತನಕ ಕಳಿಂಗ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಮೆಂಟ್‌ನ ಅಧಿಕೃತ ಕೌಂಟ್‌ಡೌನ್ ಗಡಿಯಾರವನ್ನು ಒಡಿಶಾ ಮುಖ್ಯಮಂತ್ರಿ ಉದ್ಘಾಟಿಸಿದರು. ‘‘ಒಡಿಶಾ ವೇಗವಾಗಿ ಕ್ರೀಡಾಗಮ್ಯ ಪ್ರದೇಶವಾಗಿ ಬೆಳೆಯುತ್ತಿದೆ’’ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ. ಡಿ.1 ರಿಂದ ಭುವನೇಶ್ವರದಲ್ಲಿ ಆರಂಭವಾಗಲಿರುವ ವಿಶ್ವ ಹಾಕಿ ಲೀಗ್‌ನಲ್ಲಿ ಭಾಗವಹಿಸಲಿರುವ 8 ದೇಶಗಳ ಆಟಗಾರರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಕಿ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಕಳಿಂಗ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯವನ್ನು 15,000ಕ್ಕೆ ಹೆಚ್ಚಿಸುವ ಮೂಲಕ ಅತ್ಯಾಧುನೀಕರಣಗೊಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಪಾಟ್ನಾಯಕ್ ಅವರು ಒಡಿಶಾದ 59 ಕ್ರೀಡಾಪಟುಗಳಿಗೆ ಒಟ್ಟು 76.75 ಲಕ್ಷ ರೂ. ಬಹುಮಾನ ವಿತರಿಸಿ ಗೌರವಿಸಿದರು.

ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಒಡಿಶಾದ ಹಾಕಿ ಆಟಗಾರರಾದ ಡಿಪ್ಸನ್ ಟಿರ್ಕಿ, ಅಮಿತ್ ರೋಹಿದಾಸ್, ಮಹಿಳಾ ತಂಡದ ಲಿಲಿಮಾ ಮಿಂಝ್, ನಮಿತಾ, ದೀಪ್‌ಗ್ರೇಸ್ ಎಕ್ಕಾ, ಸುನೀತಾ ಲಾಕ್ರಾ ಹಾಗೂ ರಶ್ಮಿತಾರಿಗೆ ತಲಾ 7.5 ಲಕ್ಷ ರೂ. ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News