×
Ad

ಅನೈತಿಕ ಸಂಬಂಧದ ಶಂಕೆ: ಪತ್ನಿ, ಸಹೋದ್ಯೋಗಿಯನ್ನು ಹತ್ಯೆಗೈದ ಯೋಧ

Update: 2017-11-30 19:16 IST

ಜಮ್ಮು, ನ.30: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಸಿಐಎಸ್‌ಎಫ್ ಯೋಧನೋರ್ವ ಪತ್ನಿ, ಸಹೋದ್ಯೋಗಿ ಯೋಧ ಹಾಗೂ ಯೋಧನ ಪತ್ನಿಯನ್ನು ಗುಂಡಿಟ್ಟು ಕೊಂದ ಘಟನೆ ಜಮ್ಮು ಕಾಶ್ಮೀರದ ಕಿಸ್ತ್‌ವಾರ್ ಜಿಲ್ಲೆಯಲ್ಲಿ ನಡೆದಿದೆ. ತೆಲಂಗಾಣ ಮೂಲದ ಯೋಧ ಐ.ಸುರಿಂದರ್‌ಗೆ ತನ್ನ ಪತ್ನಿ ಸಹೋದ್ಯೋಗಿ ಯೋಧ ರಾಜೇಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಸಂದೇಹವಿತ್ತು ಎನ್ನಲಾಗಿದೆ.

ಗುರುವಾರ ಮುಂಜಾನೆ 2:00 ಗಂಟೆ ವೇಳೆಗೆ ತನ್ನ ಸರ್ವಿಸ್ ಗನ್‌ನಿಂದ ಪತ್ನಿ, ರಾಜೇಶ್ ಮತ್ತು ರಾಜೇಶನ ಪತ್ನಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಸಿಐಎಸ್‌ಎಫ್ ಮಹಾನಿರ್ದೇಶಕ ಒ.ಪಿ.ಸಿಂಗ್ ತಿಳಿಸಿದ್ದಾರೆ. ಘಟನೆಯ ಬಳಿಕ ಸುರಿಂದರ್‌ನನ್ನು ಬಂಧಿಸಲಾಗಿದೆ. ಇದೀಗ ಸುರಿಂದರ್‌ನ ಇಬ್ಬರು ಮಕ್ಕಳು ಹಾಗೂ ರಾಜೇಶನ ಇಬ್ಬರು ಮಕ್ಕಳೂ ಅನಾಥರಾಗಿದ್ದು ಅವರ ಪೋಷಣೆಯ ಜವಾಬ್ದಾರಿಯನ್ನು ಸಿಐಎಸ್‌ಎಫ್ ವಹಿಸಲಿದೆ ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News