ಡಿ.24-25: ಪುತ್ತೂರಿನಲ್ಲಿ ಬ್ಯಾಡ್‍ಮಿಂಟನ್ ಪಂದ್ಯಾವಳಿ

Update: 2017-11-30 13:46 GMT

ಪುತ್ತೂರು,ನ.30 : ಪುತ್ತೂರು ಬ್ಯಾಡ್‍ಮಿಂಟನ್ ಅಕಾಡೆಮಿ ವತಿಯಿಂದ ಇಲ್ಲಿನ ಸಾಮೆತ್ತಡ್ಕದಲ್ಲಿರುವ ಸುದಾನ ಸ್ಪೋಟ್ರ್ಸ್ ಕ್ಲಬ್‍ನಲ್ಲಿ  ಡಿ.24 ಮತ್ತು 25 ರಂದು  ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲ್ಲೂಕು ಮಟ್ಟದ ಬ್ಯಾಡ್‍ಮಿಂಟನ್ ಪಂದ್ಯಾವಳಿಯನ್ನುಆಯೋಜಿಸಲಾಗಿದೆ ಎಂದು ಅಕಾಡೆಮಿಯ ನಿರ್ದೇಶಕ, ತರಬೇತುದಾರ ಪಿ.ಜಿ. ಪಾಪನ್ ಕುಮಾರ್ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಮೂರು ತಾಲ್ಲೂಕು ವ್ಯಾಪ್ತಿಯ 11 ವರ್ಷ, 13 ವರ್ಷ ಮತ್ತು 15 ವರ್ಷದೊಳಗಿನ ಬಾಲಕ -ಬಾಲಕಿಯರಿಗೆ ಸಿಂಗಲ್ಸ್ ಮತ್ತು 16 ವರ್ಷದೊಳಗಿನ ಬಾಲಕ -ಬಾಲಕಿಯರಿಗೆ ಡಬ್ಬಲ್ಸ್ ವಿಭಾಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಸುಮಾರು 200 ಮಂದಿ ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಭಾಗವಹಿಸಲು ಇಚ್ಚಿಸುವವರು  ಪ್ರವೇಶ ಪತ್ರವನ್ನು ಹುಟ್ಟಿದ ದಿನಾಂಕದ ಪ್ರಮಾಣಪತ್ರದೊಂದಿಗೆ ಡಿ.22 ರಂದು ಸಂಜೆ  5 ಗಂಟೆಯೊಳಗೆ ಪಿ.ಜಿ. ಪಾಪನ್‍ಕುಮಾರ್, ಪಿ.ಬಿ.ನಂ. 32, ಪುತ್ತೂರು ವಿಳಾಸಕ್ಕೆ ಕಳುಹಿಸಕೊಡಬಹುದು ಇಲ್ಲವೇ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಯಾಡ್‍ಮಿಂಟನ್ ಅಕಾಡೆಮಿ ನಿರ್ದೇಶಕ ಪಿ.ಜಿ. ವೆಂಕಟರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News