ಡಿ.3 : ಪುತ್ತೂರಿನಲ್ಲಿ 'ಸೇರಿಗೆದ ಗೊಬ್ಬುಲು' ಕ್ರೀಡಾಕೂಟ

Update: 2017-11-30 13:55 GMT

ಪುತ್ತೂರು,ನ.30 : ಪುತ್ತೂರು ತಾಲ್ಲೂಕು ಯುವ ಬಂಟರ ಸಂಘದ ಆಶ್ರಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮತ್ತು ಪುತ್ತೂರು ತಾಲ್ಲೂಕು ಬಂಟರ ಸಂಘ ಹಾಗೂ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಯೋಗದಲ್ಲಿ ಡಿ.3 ರಂದು ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ `ಸೇರಿಗೆದ ಗೊಬ್ಬುಲು' ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ನೆಕ್ಕಿಲು ತಿಳಿಸಿದ್ದಾರೆ. 

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2008 ರಿಂದ ಅಸ್ತಿತ್ವಕ್ಕೆ ಬಂದಿರುವ ಯುವ ಬಂಟರ ಸಂಘಟವು ವಿವಿಧ ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಸಮುದಾಯದ ಸಂಘಟನೆಯ ದೃಷ್ಟಿಯಲ್ಲಿ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದರುಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅವರು ಅಧ್ಯಕ್ಷತೆ ವಹಿಸುವರು.  ಉದ್ಯಮಿ ಸತೀಶ್ ರೈ ಕಟ್ಟಾವು ಅವರು  ಉದ್ಘಾಟಿಸುವರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಧ್ವಜಾರೋಹಣ ನೆರವೇರಿಸಲಿರುವರು. ಲೀಶರ್ ಹಾಸ್ಪಿಟಾಲಿಟಿ ಸರ್ವಿಸಸ್‍ನ ಸಿಇಒ ಹೇಮಂತ್ ರೈ ಮನವಳಿಕೆಗುತ್ತು ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡುವರು ಎಂದು ಅವರು ತಿಳಿಸಿದರು.  

ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಉದ್ಘಾಟಿಸುವರು.  ಪುತ್ತೂರು ಬಂಟರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ ಅವರು ಅಧ್ಯಕ್ಷತೆ ವಹಿಸುವರು. ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್, ಕ್ಯಾಂಪೆÇ್ಕೀ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಇಂಟಕ್ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ, ಯುವ ಬಂಟರ ಸಂಘ ಮಾಜಿ ಅಧ್ಯಕ್ಷ ರೋಶನ್ ರೈ ಬನ್ನೂರು ಅತಿಥಿಗಳಾಗಿ ಭಾಗವಹಿಸುವರು. 

ಅರ್ಜುನ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟೀಯ ಕ್ರೀಡಾಪಟು ಸತೀಶ್ ರೈ ಕುತ್ಯಾಡಿ, ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಪ್ರಶಾಂತ್ ರೈ ಕೈಕಾರ ಅವರನ್ನು ಉದ್ಯಮಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ, ಪುತ್ತೂರು ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸನ್ಮಾನಿಸುವರು ಎಂದು ತಿಳಿಸಿದರು.  

ಎಲ್‍ಕೆಜಿಯಿಂದ ಆರಂಭಗೊಂಡು ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯುವುದು. ಪುರುಷರಿಗೆ ಕಬಡ್ಡಿ ಮತ್ತು ಪುರುಷರು ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಯುವ ಬಂಟರ ಸಂಘದ ಸಂಚಾಲಕ ಅರವಿಂದ ಭಗವಾನ್ ರೈ, ಕಾರ್ಯದರ್ಶಿ ಲೋಕನಾಥ ಶೆಟ್ಟಿ ಪೆರುವಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News