×
Ad

ಡಿ.2ರಂದು ‘ವಾಯ್ಸ ಆಫ್ ಉಡುಪಿ’ ಅಂತಿಮ ಸುತ್ತು

Update: 2017-11-30 19:35 IST

ಉಡುಪಿ, ನ.30: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಇದರ ಉಡುಪಿ ಘಟಕದ ವತಿಯಿಂದ ‘ವಾಯ್ಸ್ ಆಫ್ ಉಡುಪಿ’ ಐದನೆ ಆವೃತ್ತಿಯ ಅಂತಿಮ ಸುತ್ತು ಡಿ.2ರಂದು ಸಂಜೆ 6ಗಂಟೆಗೆ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾಗಿದೆ.

15ವರ್ಷದೊಳಗಿನ ಮತ್ತು 15ವರ್ಷ ಮೇಲ್ಪಟ್ಟ ಸ್ಪರ್ಧಿಗಳು ಇದರಲ್ಲಿ ಭಾಗ ವಹಿಸುತ್ತಿದ್ದು, ಈಗಾಗಲೇ ನಾಲ್ಕು ಸುತ್ತು ಸಂಪೂರ್ಣಗೊಂಡಿದೆ. ಅಂತಿಮ ಸುತ್ತಿನಲ್ಲಿ ತೀರ್ಪುಗಾರರಾಗಿ ಚಲನಚಿತ್ರ ಹಿನ್ನೆಲೆ ಗಾಯಕರುಗಳಾದ ಅಜಯ್ ವಾರಿಯರ್ ಬೆಂಗಳೂರು, ಯಶವಂತ್, ಶಶಿಕಿರಣ್ ಚೆನ್ನಗಿರಿ ಭಾಗವಹಿಸ ಲಿರುವರು. ಹೆಚ್ಚಿನ ವಿವರಗಳಿಗೆ ಮೊ-9964025537ಗೆ ಸಂಪರ್ಕಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಭಾಸ್ಕರ ಬಸ್ರೂರು, ಉಪಕಾರ್ಯದರ್ಶಿ ಕೆ. ನವೀನ್‌ಚಂದ್ರ ಕೊಪ್ಪ, ಮಣಿಪಾಲ ಸಂಚಾಲಕ ಜನಾರ್ದನ ಪದ್ಮಶಾಲಿ, ಮಾಜಿ ಉಪಾಧ್ಯಕ್ಷ ಶರತ್ ಉಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News