×
Ad

ಆಝಾನ್ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

Update: 2017-11-30 20:34 IST

ಗುಜರಾತ್, ನ.30: ಇಲ್ಲಿನ ನವ್ಸಾರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಸಮೀಪದ ಮಸೀದಿಯಲ್ಲಿ ಆಝಾನ್ ಕೇಳಿದಾಗ ಭಾಷಣವನ್ನು ನಿಲ್ಲಿಸಿದ ಘಟನೆ ನಡೆದಿದೆ. ಆಝಾನ್ ಮುಗಿದ ನಂತರ ಅವರು ತನ್ನ ಭಾಷಣವನ್ನು ಮತ್ತೆ ಆರಂಭಿಸಿದ್ದಾರೆ.

2016ರಲ್ಲಿ ಪಶ್ಚಿಮ ಬಂಗಾಳದ ಖಾರಗ್ ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಸಂದರ್ಭ ಆಝಾನ್ ಆರಂಭವಾಗಿದ್ದರಿಂದ ಮೋದಿ ತಮ್ಮ ಭಾಷಣವನ್ನು ನಿಲ್ಲಿಸಿದ್ದರು. “ಯಾರ ಪ್ರಾರ್ಥನೆಗೂ ತೊಂದರೆಯನ್ನುಂಟು ಮಾಡಲು ನಾನು ಬಯಸುವುದಿಲ್ಲ. ಆದ್ದರಿಂದ ನಾನು ಸ್ವಲ್ಪ ವಿಶ್ರಾಂತಿ ಪಡೆದೆ” ಎಂದು ಆಝಾನ್ ಮುಗಿದ ನಂತರ ಅವರು ಹೇಳಿದ್ದರು.

ಗುಜರಾತ್ ನಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಇಂದು ಪ್ರಧಾನಿ ಮೋದಿ 3 ಕಡೆಗಳಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದರು.

“ಅವರು ಅಭಿವೃದ್ಧಿಯನ್ನು ದ್ವೇಷಿಸುತ್ತಾರೆ. ಅವರು ಗುಜರಾತನ್ನು ದ್ವೇಷಿಸುತ್ತಾರೆ. ಅವರು ಮೋದಿಯನ್ನು ದ್ವೇಷಿಸುತ್ತಾರೆ ಹಾಗು ಈಗ ಅವರು ಬೆವರನ್ನೂ ದ್ವೇಷಿಸುತ್ತಾರೆ. ಏಕೆಂದರೆ ಅವರು ಜೀವನದಲ್ಲೇ ಕಠಿಣ ಕೆಲಸಗಳನ್ನು ಮಾಡಿಲ್ಲ ಹಾಗು ಬೆವರನ್ನು ಕಂಡಿಲ್ಲ. ಇದು ಅವರ ಮನಸ್ಥಿತಿ” ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News