ಕಾರ್ಕಳ : ಮಹಿಳೆಯ ಸರ ಅಪಹರಣ
Update: 2017-11-30 21:36 IST
ಕಾರ್ಕಳ, ನ.30: ವಾಕಿಂಗ್ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದ ಮಹಿಳೆಯ ಮಂಗಳ ಸೂತ್ರ ಅಪಹರಿಸಿರುವ ಘಟನೆ ನ.30ರಂದು ಬೆಳಗಿನ ಜಾವ 5.40ರ ಸುಮಾರಿಗೆ ನಡೆದಿದೆ.
ತೆಳ್ಳಾರು ಅತ್ತಿ ನಗರದ ಶೈಲಜಾ ಪಿ.(42) ಎಂಬವರು ತನ್ನ ಗಂಡ ರಮೇಶ್ ರಾವ್ ಜೊತೆ ವಾಕಿಂಗ್ ಮುಗಿಸಿ ವಾಪಾಸ್ಸು ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದು, ಈ ವೇಳೆ ಕಾರ್ಕಳ ಬಸ್ ನಿಲ್ದಾಣ ಕಡೆಯಿಂದ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಶೈಲಜಾರ ಬಳಿ ಬಂದು ಹಿಂಬದಿ ಸವಾರ ಅವರ ಕುತ್ತಿಗೆಗೆ ಕೈ ಹಾಕಿ ಸುಮಾರು 32 ಗ್ರಾಂ ತೂಕದ ಮಂಗಳ ಸೂತ್ರವನ್ನು ಸುಲಿಗೆ ಮಾಡಿ ಪರಾರಿಯಾದರೆನ್ನಲಾಗಿದೆ. ಕಳವಾದ ಮಂಗಳ ಸೂತ್ರದ ಮೌಲ್ಯ ಸುಮಾರು 90,000ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.