ಡಿ.2;ಫಾ.ಮುಲ್ಲಾರ್ ವೈದ್ಯಕೀಯ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಕ್ರಮ
Update: 2017-11-30 21:54 IST
ಮಂಗಳೂರು.ನ.30:ಫಾದರ್ ಮುಲ್ಲಾರ್ ವೈದ್ಯಕೀಯ ಕಾಲೇಜು ರೋಗ ವಿಜ್ಞಾನ ಅಧ್ಯಯನ ವಿಭಾಗ ಹಾಗೂ ಇಂಡಿಯನ್ ಸೊಸೈಟಿ ಟ್ರಾನ್ಸ್ ಫ್ಯುಶನ್ ಮೆಡಿಸಿನ್ ವತಿಯಿಂದ ಟ್ರಾನ್ಸ್‌ಕ್‌ಮಿ -2017 ಒಂದು ದಿನದ ರಾಷ್ಟ್ರೀಯ ಕಾರ್ಯಕ್ರಮವನ್ನು ಡಿ.2 ರಂದು ಹಮ್ಮಿಕೊಳ್ಳಲಾಗಿದೆ .
ಉದ್ಘಾಟನಾ ಕಾರ್ಯಕ್ರಮದಲ್ಲಿ ಫಾ.ಮುಲ್ಲಾರ್ ಚ್ಯಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೊಶಿಯಸ್ ಕುಯೆಲ್ಲೋ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಸೊಸೈಟಿ ಟ್ರಾನ್ಸ್ ಫ್ಯುಶನ್ ಮೆಡಿಸಿನ್ ನ ಅಧ್ಯಕ್ಷ ಡಾ.ಆರ್.ಎನ್.ಮಾಕ್ರೂ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.