ಜೋಯ್ ಅಲುಕ್ಕಾಸ್ ನಲ್ಲಿ 'ದಿ ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್' ಆಫರ್
ಮಂಗಳೂರು,ನ.30:ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಜೋಯ್ ಅಲುಕ್ಕಾಸ್ ಅಗಾಧ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದು ಇದೀಗ ಅವರಿಗಾಗಿ ದಿ ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಆಫರ್ ಮೂಲಕ ಹಳೆ ಚಿನ್ನ ಬದಲಾಯಿಸಲು ಅವಕಾಶ ನೀಡುತ್ತಿದೆ. ಈ ಯೋಜನೆಯಡಿ ಗ್ರಾಹಕರು ಇತರ ಯಾವುದೇ ಚಿನ್ನದಂಗಡಿಯಿಂದ ಖರೀದಿಸಿದ ಚಿನ್ನವನ್ನು ಜೋಯ್ ಅಲುಕ್ಕಾಸ್‌ನಲ್ಲಿ ಬದಲಾಯಿಸಬಹುದು ಮತ್ತು ಅದಕ್ಕಾಗಿ ಒಂದು ರೂಪಾಯಿಯನ್ನೂ ನೀಡಬೇಕಾಗಿಲ್ಲ.
ಈ ಆಫರ್ ಅವಧಿಯಲ್ಲಿ ಗ್ರಾಹಕರು ಯಾವುದೇ ಜೋಯ್ ಅಲುಕ್ಕಾಸ್ ಶೋರೂಂಗೆ ತೆರಳಿ ತಮ್ಮ ಬಂಗಾರವನ್ನು ತೂಕದಲ್ಲಿ ಅಥವಾ ದರದಲ್ಲಿ ಯಾವುದೇ ನಷ್ಟವಿಲ್ಲದೆ ಎಕ್ಸ್‌ಚೇಂಜ್ ಮಾಡಬಹುದು ಎಂದು ಸಂಸ್ಥೆಯು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೋಯ್ ಅಲುಕ್ಕಾಸ್‌ನ ಡಬಲ್ ಗೋಲ್ಡ್ ರೇಟ್ ಪ್ರೊಟೆಕ್ಷನ್ ಯೋಜನೆಯಡಿ ಗ್ರಾಹಕರು ಚಿನ್ನವನ್ನು ಮುಂಗಡವಾಗಿ ಬುಕ್ ಮಾಡಲು ಅವಕಾಶವಿದ್ದು ಅದರ ಬೆಲೆಯನ್ನು ಬುಕಿಂಗ್ ದಿನದ ದರಕ್ಕೆ ಅನುಗುಣವಾಗಿ ಅಥವಾ ಚಿನ್ನ ಪಡೆಯುವ ಸಮಯದಲ್ಲಿರುವ ಮಾರುಕಟ್ಟೆ ದರ (ಯಾವುದು ಕಡಿಮೆಯೋ ಅದು) ಕ್ಕಣುಗುಣವಾಗಿ ಪಾವತಿಸಬಹುದು.
ಜೋಯ್ ಅಲುಕ್ಕಾಸ್ ಒಂದು ಸಮೂಹ ಸಂಸ್ಥೆಯಾಗಿದ್ದು ಹಲವು ಕ್ಷೇತ್ರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಒಮನ್, ಕುವೈಟ್, ಕತಾರ್, ಸಿಂಗಾಪುರ, ಮಲೇಷ್ಯಾ, ಲಂಡನ್ ಮತ್ತು ಭಾರತ ಹೀಗೆ ಹಲವು ದೇಶಗಳಲ್ಲಿ ಸಂಸ್ಥೆಯು ತನ್ನ ವ್ಯವಹಾರಗಳನ್ನು ಸ್ಥಾಪಿಸಿದೆ. ಚಿನ್ನ, ಮನಿ ಎಕ್ಸ್‌ಚೇಂಜ್, ಫ್ಯಾಶನ್ ಮತ್ತು ಟೆಕ್ಸ್‌ಟೈಲ್, ಐಷಾರಾಮಿ ವಾಯುಯಾನ, ಮಾಲ್‌ಗಳು ಮತ್ತು ರಿಯಲ್ಟಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಜೋಯ್ ಅಲುಕ್ಕಾಸ್ ವ್ಯವಹಾರ ನಡೆಸುತ್ತಿದೆ. ಜೋಯ್ ಅಲುಕ್ಕಾಸ್‌ನಲ್ಲಿ ಜಗತ್ತಿನಾದ್ಯಂತ 8,000ಕ್ಕೂ ಅಧಿಕ ಸಿಬ್ಬಂದಿಯಿದ್ದು ಜಗತ್ತಿನಲ್ಲಿಯೇ ಅತೀಹೆಚ್ಚು ಪ್ರಶಸ್ತಿಗಳನ್ನು ಮತ್ತು ಮನ್ನಣೆ ಪಡೆದಿರುವ ಸಂಸ್ಥೆಯಾಗಿದೆ.