ಫಾ.ಮುಲ್ಲಾರ್ ಅಸ್ಪತ್ರೆಯಲ್ಲಿ ಪಿತ್ತಕೊಶದ (ಎಚ್‌ಸಿಸಿ)ಕ್ಯಾನ್ಸರ್‌ಗೆ ಉದರ ದರ್ಶಕದ ಮೂಲಕ ಯಶಸ್ವಿ ಚಿಕಿತ್ಸೆ
ಮಂಗಳೂರು,ನ.30:ನಗರದ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದಲ್ಲಯೇ ಪ್ರಥಮ ಬಾರಿಗೆ ಉದರ ದರ್ಶಕದ ಮೂಲಕ ಯಶಸ್ವಿಯಾಗಿ ಪಿಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಚಿಕಿತ್ಸೆ ನೀಡಿದ ತಂಡದ ವೈದ್ಯರಾದ ಡಾ.ಗಣೇಶ್ ಕಾಮತ್‌ರವರ ಪ್ರಕಾರ,‘‘ಹೆಚ್ಚಿನ ಪಿತ್ತಕೋಶದ ಕ್ಯಾನ್ಸರ್‌ಗೆ ತೆರೆದ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ.ಈ ಪ್ರಕರಣದಲ್ಲಿ ಉದರ ದರ್ಶಕದ ಮೂಲಕ ರೋಗಿಗೆ ಹೆಚ್ಚು ಗಾಯಗಳಿಲ್ಲದೆ ಚಿಕಿತ್ಸೆ ನಡೆಸಲಾಗಿದೆ.ದೇಶದ ಕೆಲವೇ ಕೆಲವು ಅತ್ಯಾಧುನಿಕ ಉದರ ದರ್ಶಕ ಚಿಕಿತ್ಸೆ ಇರುವ ಕೇಂದ್ರಗಳಲ್ಲಿ ಈ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ.ಈ ಪ್ರಕರಣದಲ್ಲಿ ರೋಗಿಯ ಪಿತ್ತಕೋಶದಲ್ಲಿ 11-7-5 ಸೆ.ಮೀ ಗಾತ್ರದ ಗೆಡ್ಡೆಯನ್ನು ಆರು ಗಂಟೆಗಳ ಕಾಲ ನಡೆಸ ಉದರ ದರ್ಶಕ ಚಿಕಿತ್ಸೆಯಿಂದ ತೆಗೆದು ರೋಗಿ ಗುಣಮುಖರಾಗುತ್ತಿದ್ದಾರೆ ’’ಎಂದು ತಿಳಿಸಿದ್ದಾರೆ.
ಚಿಕಿತ್ಸೆ ನೀಡಿದ ತಂಡದಲ್ಲಿ ಡಾ.ಗಣೇಶ್,ಡಾ.ಎರಿಲ್ ಡಯಾಝ್, ಡಾ.ಅಜಯ್, ಡಾ.ಮೊನೋಲಿಸಾ,ಡಾ.ರಾಧೇಶ್ ಹೆಗ್ಡೆ, ಹಾಗು ಅರಿವಳಿಕೆ ತಜ್ಞರಾಗಿ ಡಾ.ಗುರುಮೂರ್ತಿ, ಡಾ.ಶೈಲಜಾ,ಡಾ.ಮಂಜುಳಾ ಕರ್ತವ್ಯ ನಿರ್ವಹಿಸಿದ್ದಾರೆ .ವೈದ್ಯರ ಸಾಧನೆಗೆ ಸಂಸ್ಥೆಯ ನಿರ್ದೇಶಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.