ಮಂಗಳೂರು ವಿಮಾನ ನಿಲ್ದಾಣ : ಒಂದು ತಿಂಗಳಲ್ಲಿ ಪತ್ತೆಯಾದ ಚಿನ್ನ ಕಳ್ಳ ಸಾಗಣೆ ಎಷ್ಟು ಗೊತ್ತೇ?
ಮಂಗಳೂರು, ನ. 30: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳಿನಲ್ಲಿ ವಿವಿಧ 6 ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು 64.38 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.
ಚಿನ್ನದ ಪುಡಿಯನ್ನು ರಾಸಾಯನಿಕದೊಂದಿಗೆ ಬೆರೆಸಿ ಸಾಗಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ 803 ಗ್ರಾಂ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನೋರ್ವ ಚಿನ್ನವನ್ನು ತನ್ನ ಪಾದದ ಅಡಿಯಲ್ಲಿಟ್ಟು ಕಳ್ಳಸಾಗಾಟಕ್ಕೆ ಯತ್ನಿಸಿದ 466.4 ಗ್ರಾಂ ಚಿನ್ನ, ಇನ್ನೋರ್ವ ಪ್ರಯಾಣಿಕ ತನ್ನ ಪ್ಯಾಂಟಿನಲ್ಲಿ 184.29 ಗ್ರಾಂ ಚಿನ್ನದ ಬಿಸ್ಕತ್‌ನ್ನು ಅಡಗಿಸಿಟ್ಟಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನೋರ್ವ ತನ್ನ ಗುದದ್ವಾರದಲ್ಲಿಟ್ಟು ಕಳ್ಳ ಸಾಗಾಟಕ್ಕೆ ಯತ್ನಿಸಿದ 466.5 ಗ್ರಾಂನ ಚಿನ್ನದ 4 ಬಿಸ್ಕತ್‌ಗಳು, 221 ಗ್ರಾಂ ತೂಕದ ಚಿನ್ನದ ಕತ್ತಿಯನ್ನು ಉಕ್ಕಿನ ಲೇಪನದಿಂದಮರೆಮಾಚಿರುವುದನ್ನು ಕೂಡ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ನವೆಂಬರ್‌ನಲ್ಲಿ ಒಟ್ಟು 2.141 ಕಿ.ಗ್ರಾಂ. ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿದ ಸೊತ್ತುಗಳ ಒಟ್ಟು ವೌಲ್ಯ 64.38 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.