ಆಳ್ವಾಸ್ ನುಡಿಸಿರಿ ಜಾತ್ರೆಯಲ್ಲಿ ಪರಿಸರ ಸ್ನೇಹಿ ಗೋರಿಲ್ಲಾ
Update: 2017-12-01 17:55 IST
ಮಣಿಪಾಲ, ಡಿ.1: ಇಲ್ಲಿನ ಮಣಿಪಾಲ ಸ್ಯಾಂಡ್ ಹಾರ್ಟ್‌ನ ಕಲಾವಿದ ರಾದ ಶ್ರೀನಾಥ್ ಮಣಿಪಾಲ್, ವೆಂಕಿ ಪಲಿಮಾರು, ರವಿಹಿರೆಟ್ಟು, ಹಾಗೂ ಅಕ್ಷಯರಾಜ್ ಇವರು ಆಳ್ವಾಸ್‌ನ ಕಲಾ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹುಲ್ಲು, ಸೆಣಬು ಮುಂತಾದ ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸಿ ಬೃಹತ್ ಗೋರಿಲ್ಲಾವನ್ನು ನಿರ್ಮಿಸಿದ್ದಾರೆ.
ಹೊಸ ಹೊಸ ಪ್ರಯೋಗಾತ್ಮಕ ಕಲಾಕೃತಿ ರಚನೆಯಲ್ಲಿ ಹೆಸರುವಾಸಿ ಯಾಗಿರುವ ಈ ಕಲಾವಿದರ ಕಲಾಕೃತಿಯು ಈ ಬಾರಿಯ ಆಳ್ವಾಸ್ ನುಡಿಸಿರಿಯ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದೆ. ಮೂಡಬಿದರೆಗೆ ಆಗಮಿಸುತ್ತಿರುವ ಲಕ್ಷಾಂತರ ಕಲಾಪ್ರೇಮಿಗಳನ್ನು ಪರಿಸರ ರಕ್ಷಿಸಿ ಸಂದೇಶ ನೀಡುವ ಈ ಗೆರಿಲ್ಲಾ ಆತ್ಮೀಯವಾಗಿ ಸ್ವಾಗತಿಸುತ್ತಿದೆ.