×
Ad

ಭಟ್ಕಳ: ಸಂಭ್ರಮದ ಮೀಲಾದ್ ಮೆರವಣಿಗೆ

Update: 2017-12-01 18:04 IST

ಭಟ್ಕಳ, ಡಿ. 1: ಇಲ್ಲಿನ ಬಝ್ಮೆ ಫೈಝೆ ರಸೂಲ್ ಹಾಗೂ ಇದಾರ-ಎ-ಫೈರ್-ಎ-ರಸೂಲ್ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಂದಿ ಮೀಲಾದ್ ಮೆರವಣೆಗೆ ನಡೆಸುವುದರ ಮೂಲಕ ಮಿಲಾದುನ್ನಬಿ ಆಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

ನಗರದ ಈದ್ಗಾ ಮೈದಾನದಿಂದ ಆರಂಭಗೊಂಡ ಪ್ರವಾದಿ ಪ್ರೇಮಿಗಳ ಮಿಲಾದ್ ಮೆರವಣೆಗೆ ಶಮ್ಸುದ್ದೀನ್ ವೃತ್ತದ ಮೂಲಕ ಹಳೆ ಬಸ್ ನಿಲ್ದಾಣದ ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಇದಾರ-ಎ-ಫೈರ್-ಎ-ರಸೂಲ್ ಸಂಘಟನೆಯ ಅಧ್ಯಕ್ಷ ಮೌಲಾನ ಜಿಫ್ರಿ ಅಕ್ರಮಿ, ಬಝ್ಮೆ ಫೈಝೆ ರಸೂಲ್ ಸಂಘಟನೆಯ ಅಧ್ಯಕ್ಷ ಕ್ವಾಜಾ ಕಲಾಯಿವಾಲ, ಮಸ್ತಾನ್ ಚಡುಬಾಪ, ಫಾರೂಖಿ ಆಹ್ಮದ್, ಮೌಲಾನ ಫೈಝಾನ್ ರಝಾ, ಹ್ಯೂಮನ್ ರೈಟ್ಸ್ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಶರೀಫ್,ಸೈಯ್ಯದ್ ಮಂಝರ್ ಹುಸೇನ್ ಅಂಕೋಲಾ ಸೇರಿದಂತೆ ವಿವಿಧ ಗಣ್ಯರು ಮಿಲಾದ್ ಮೆರವಣೆಗೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News