×
Ad

ಎಂಎನ್‌ಎಸ್ ಕಾರ್ಯಕರ್ತರಿಂದ ಮುಂಬೈ ಕಾಂಗ್ರೆಸ್ ಕಚೇರಿ ದ್ವಂಸ: ಆರೋಪ

Update: 2017-12-01 20:22 IST

 ಮುಂಬೈ, ಡಿ.1: ಬೀದಿ ಬದಿ ವ್ಯಾಪಾರಿಗಳ ತೆರವು ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ನವನಿರ್ಮಾಣ ವೇದಿಕೆ (ಎಂಎನ್‌ಎಸ್) ನಡುವಿನ ಜಟಾಪಟಿ ಶುಕ್ರವಾರ ಹಿಂಸಾತ್ಮಕ ರೂಪ ಪಡೆದಿದ್ದು, ಮುಂಬೈಯ ಕಾಂಗ್ರೆಸ್ ಕಚೇರಿಯ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ದಾಳಿ ನಡೆಸಿ ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

     ಕಾಂಗ್ರೆಸ್ ಕಚೇರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ‘ಸರ್ಜಿಕಲ್ ದಾಳಿ’ ನಡೆಸಿದ್ದಾರೆ. ಇದು ಮುಯ್ಯಿಗೆ ಮುಯ್ಯಿಯಾಗಿದೆ ಎಂದು ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹೇಳಿದ್ಧಾರೆ. ಮುಂಬೈ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಕಚೇರಿಯ ವಸ್ತುಗಳನ್ನು ಹಾಳುಗೆವಿದ್ದಾರೆ. ಕಾಂಗ್ರೆಸ್ ಘಟಕಾಧ್ಯಕ್ಷ ಸಂಜಯ್ ನಿರುಪಮ್ ಅವರ ಕ್ಯಾಬಿನ್‌ಗೂ ಹಾನಿ ಎಸಗಿದ್ದಾರೆ . ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವ ಕ್ರಮವನ್ನು ಮುಂಬೈ ಕಾಂಗ್ರೆಸ್ ಘಟಕಾಧ್ಯಕ್ಷ ಸಂಜಯ್ ನಿರುಪಮ್ ವಿರೋಧಿಸಿ ವ್ಯಾಪಾರಿಗಳ ಬೆಂಬಲಕ್ಕೆ ನಿಂತಿದ್ದರು. ಎಂಎನ್‌ಎಸ್ ಕಾರ್ಯಕರ್ತರ ಹತಾಶ ಮನೋಭಾವನೆಗೆ ಈ ಹೇಡಿತನದ ದಾಳಿ ಪ್ರಕರಣ ನಿದರ್ಶನವಾಗಿದೆ . ತಪ್ಪಿತಸ್ಥರ ವಿರುದ್ಧ ಮುಖ್ಯಮಂತ್ರಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News