ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್‌ನಲ್ಲಿ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಶೋ
ಉಡುಪಿ, ಡಿ.1: ಇಲ್ಲಿನ ಮಸೀದಿ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್‌ನ ಉಡುಪಿ ಶೋರೂಮ್‌ನಲ್ಲಿ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಪ್ರದರ್ಶನ ಇಂದಿನಿಂದ ಪ್ರಾರಂಭಗೊಂಡಿದ್ದು ಇನ್ನೂ ಮೂರು ದಿನ ಮುಂದುವರಿಯಲಿದೆ.
ಇದರಲ್ಲಿ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಾಭರಣಗಳ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟವಿದ್ದು, ಪ್ರದರ್ಶನವನ್ನು ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್ ಗ್ರಾಹಕರ ಉಪಸ್ಥಿತಿಯಲ್ಲಿ ಇಂದು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ವೀಣಾ ಎಸ್.ಶೆಟ್ಟಿ, ಸೋನ ಜೆ.ಪಿ., ಡಾ.ಚೈತ್ರ ಭಟ್, ಶೋಭಾ ಕುಂದರ್, ರೇಷ್ಮಾ ಎ.ಶೆಟ್ಟಿ, ಬೋಳ ವೃಂದ ಕಾಮತ್ ಹಾಗೂ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಹಫೀಝ್ ರೆಹಮಾನ್ ಅಲ್ಲದೇ ಇತರ ಆಡಳಿತ ಸದಸ್ಯರು ಉಸ್ಥಿತರಿದ್ದರು.
ಸೂಕ್ಷ್ಮಾತೀತ ಕುಸುರಿ ಕೆಲಸಗಳಿಂದ ನಿರ್ಮಾಣಗೊಂಡ ಆಭರಣಗಳು, ಕುಶಲಕರ್ಮಿಗಳ ಕೌಶಲ್ಯವನ್ನು ಎತ್ತಿ ತೋರಿಸುತಿದ್ದು, ಪ್ರತಿ ಆಭರಣ ಅವರ ನೈಪುಣ್ಯತೆ ಮತ್ತು ಕುಶಲತೆಗೆ ಸಾಕ್ಷಿಯಾಗಿವೆ. ಈ ಮೂಲಕ ಈ ಪ್ರದರ್ಶನದ ವಿಷಯವಾದ ‘ಪ್ರತಿ ಆಭರಣದಲ್ಲೂ ಕಲೆಯಿದೆ’ ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ರದರ್ಶನದಲ್ಲಿಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್‌ನ ಸಬ್‌ಬ್ರಾಂಡ್ ಗಳಾದ ಮೈನ್-ವಜ್ರಾಭರಣಗಳು, ಇರಾ-ಆನ್ಕಟ್ ವಜ್ರಾಭರಣಗಳು, ಡಿವೈನ್- ಭಾರತೀಯ ಪಾರಂಪರಿಕ ಆಭರಣಗಳು, ಎಥಿನಿಕ್ಸ್-ಕರಕುಶಲ ವಿನ್ಯಾಸಿತ ಆಭರಣಗಳು, ಪ್ರಶಿಯಾ-ಅಮೂಲ್ಯ ರತ್ನಾಭರಣಗಳು, ಸ್ಟಾರ್ಲೆಟ್- ಮಕ್ಕಳ ಆಭರಣಗಳು, ಹಾಯ್- ಕ್ಯಾಷುವೆಲ್ ಆಭರಣಗಳು- ಇವೆಲ್ಲದರ ಆಯ್ಕೆಯ ಸಂಗ್ರಹ ಇಲ್ಲಿದೆ.
ಮನಮೋಹಕವಾದ ಆಭರಣಗಳನ್ನು ವಿಶೇಷ ಕೊಡುಗೆಗಳೊಂದಿಗೆ ಕೊಳ್ಳುವ ಸುವರ್ಣಾವಕಾಶವನ್ನು ‘ಆರ್ಟಿಸ್ಟ್ರಿ’ ಪ್ರದರ್ಶನ ಡಿ.1ರಿಂದ 4ರವರೆಗೆ ಕಲಾಪೋಷಕರಿಗೆ ಒದಗಿಸುತ್ತಿದೆ. ಅತ್ಯಂತ ನಂಬಿಕೆಯ ಆಭರಣಗಳ ಬ್ರಾಂಡ್‌ಗಳಲ್ಲಿ ಒಂದಾಗ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್, 9 ದೇಶಗಳಲ್ಲಿ 195ಕ್ಕೂ ಅಧಿಕ ಶೋರೂಂಗಳನ್ನು ಹೊಂದಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವ್ಯವಹಾರ ಸಮೂಹವಾಗಿದೆ. ಈ ಸಂದರ್ಭದಲ್ಲಿ ತಮ್ಮೆಲ್ಲಾ ಗ್ರಾಹಕರಿಗೂ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಮಲಬಾರ್‌ನ ಸ್ಟೋರ್ ಹೆಡ್ ಹಫೀಝ್ ರೆಹಮಾನ್ ತಿಳಿಸಿದ್ದಾರೆ.